ದೆಹಲಿ; ಕೇಂದ್ರ ಸರ್ಕಾರದ ಬಜೆಟ್ ಬಗ್ಗೆ ತೀವ್ರ ಕುತೂಹಲ ಉಂಟಾಗಿತ್ತು. ಹಲವು ರಿಯಾಯಿತಿ, ಹಲವಾರು ವಿನಾಯಿತಿ ಪ್ರಕಟಿಸಿದ್ದು, ವಿದ್ಯುನ್ಮಾನ ಉಪಕರಣಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸಲಾಗಿದೆ.
ಬಜೆಟ್‌ನ ಆಯ್ದ ಅಂಶಗಳು ಹೀಗಿವೆ:
- ಗೃಹ ಸಾಲದ ಮೇಲಿನ ತೆರಿಗೆ ವಿನಾಯಿತಿ ಇನ್ನೊಂದು ವರ್ಷ ವಿಸ್ತರಣೆ
- ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿ ಬಂಡವಾಳ ಹಿಂತೆಗೆತ.
- ಚಾರಿಟೇಬಲ್ ಟ್ರಸ್ಟ್ ಗಳಿಗೆ ವಿನಾಯಿತಿ
- ಕಾರ್ಮಿಕರಿಗೆ ಬಾಡಿಗೆ ಮನೆ ನೀಡುವ ಮನೆಮಾಲೀಕರಿಗೆ ತೆರಿಗೆ ವಿನಾಯಿತಿ.
- ಸ್ಟಾರ್ಟ ಅಪ್ ಗಳಿಗೆ ತೆರಿಗೆ ರಜೆ ಘೋಷಣೆ.
- ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಅಬಕಾರಿ ಸುಂಕ 2.5ರಷ್ಟು ಹೆಚ್ಚಳ
- ಟಿವಿ ಹವಾನಿಯಂತ್ರಿತ ಮತ್ತು ಮೊಬೈಲ್ ಸೇರಿದಂತೆ ಎಲೆಕ್ಟ್ರಾನಿಕ್ಸ್ ವಸ್ತುಗಳು ದುಬಾರಿ
- ಜವಳಿ ಉಕ್ಕು ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಳ
- ಚಿನ್ನದ ಒಡವೆಗಳ ಮೇಲೆ 12.5 ಅಬಕಾರಿ ಸುಂಕ ಮುಂದುವರಿಕೆ
- ಆಟೋಮೊಬೈಲ್ ಉತ್ಪನ್ನಗಳ ಮೇಲೆ ಸುಂಕ ಹೆಚ್ಚಳ
- ಪ್ಲಾಸ್ಟಿಕ್ ಉತ್ಪನ್ನಗಳ ಮೇಲೆ ಸುಂಕ ಹೆಚ್ಚಳ
- ಆಯ್ದ ಚಿನ್ನದ ಆಭರಣಗಳ ಮೇಲೆ ಸುಂಕ ಇಳಿಕೆ
- ಮನೆಗೆ ಖರೀದಿಸುವ ವಿವಿಧ ಬಣ್ಣಗಳು ಅಗ್ಗ.
- ಹತ್ತಿ ಉತ್ಪನ್ನದ ಮೇಲೆ ಸುಂಕ ಹೆಚ್ಚಳ
- ಡಿಸೆಂಬರ್’ನಲ್ಲಿ ಮಾನವರಹಿತ ಬಾಹ್ಯಾಕಾಶ ಯಾನ
- 75 ಏಕಲವ್ಯ ಮಾದರಿ ಶಾಲೆಗಳ ಸ್ಥಾಪನೆ
- ಭಾರತ ಜಪಾನ್ ನಡುವೆ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮ
- ರಾಷ್ಟ್ರೀಯ ಭಾಷಾಂತರ ನೀತಿ ಜಾರಿ
- ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ
- ಟೀ ಕಾರ್ಮಿಕರಿಗೆ 300 ಕೋಟಿ ರೂಪಾಯಿ ಘೋಷಣೆ
- ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆ ಜಾರಿ.
- ದೇಶದಲ್ಲಿ ಮೊದಲ ಡಿಜಿಟಲ್ ಗಣತಿಗಾಗಿ 3700 ಸಾವಿರ ಕೋಟಿ ರೂಪಾಯಿ ಘೋಷಣೆ
- 20 ವರ್ಷ ಮೇಲ್ಪಟ್ಟ ವಾಹನಗಳು ಗುಜರಿಗೆ.
- ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿ ಬಂಡವಾಳ ಹಿಂತೆಗೆತ
- ವಿಮಾ ಕಂಪನಿಗಳಿಗೆ ವಿದೇಶಿ ಬಂಡವಾಳ ಹೆಚ್ಚಳ
- ಆಹಾರ ನಿಗಮಕ್ಕೆ ಕೊಡುತ್ತಿದ್ದ ಸಾಲ ರದ್ದು
- ರಾಷ್ಟ್ರೀಯ ಸಾಮಾಜಿಕ ಭದ್ರತಾ ನಿಧಿಯಿಂದ ಕೊಡಲಾಗುತ್ತಿದ್ದ ಸಾಲ ರದ್ದು
- ರಷ್ಯಾದಲ್ಲಿ ಭಾರತದ ಗಗನಯಾನಿಗಳಿಗೆ ತರಬೇತಿ
- 17 ನೂತನ ಮೊಬೈಲ್ ಹೆಲ್ತ್ ಯೂನಿಟ್ ಸ್ಥಾಪನೆ
- 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಪಿಂಚಣಿ, ಬಡ್ಡಿ ಆದಾಯಕ್ಕೆ ತೆರಿಗೆ ಇಲ್ಲ
- 15 ಲಕ್ಷ ಮೇಲ್ಪಟ್ಟ ತೆರಿಗೆ ವಂಚನೆಗೆ ಮಾತ್ರ ಕೇಸ್
- ಅನಿವಾಸಿ ಭಾರತೀಯರಿಗೆ ದ್ವಿ ತೆರಿಗೆ ಇಲ್ಲ.