ದೆಹಲಿ: ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‌ನಲ್ಲೂ ಕ್ರಾಂತಿಕಾರಿ ಯೋಜನೆಗಳನ್ನು ಪ್ರಕಟಿಸಿದೆ. ಕೋವಿಡ್ ಸಂದರ್ಭದ ಪರಿಸ್ಥಿತಿಯ ಹೊಡೆತದಿಂದ ಜನ ಚೇತರಿಸಿಕೊಳ್ಳಬಹುದೆಂಬ ಅಂದಾಜಿನ ಆಧಾರದಲ್ಲಿ ಬಜೆಟ್ ಸಿದ್ದಪಡಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಲೋಕಸಭೆಯಲ್ಲಿಂದು ಮಂಡಿಸಿದ ಆಯವ್ಯಯ ಗಮನಸೆಳೆಯಿತು.
ಶೈಕ್ಷಣಿಕ ಕ್ಷೇತ್ರದ ಸುಧಾರಣೆಗಾಗಿ ಡಿಜಿಟಲ್ ಯೂನಿವರ್ಸಿಟಿ ಸ್ಥಾಪಿಸಿ ಆ ಮೂಲಕ ‘ಒನ್ ಕ್ಲಾಸ್ ಮೆನಿ ಟಿವಿ’ ಕಾರ್ಯಕ್ರಮ ರೂಪಿಸಿದೆ.
ಇ-ಪಾಸ್‌ಪೋರ್ಟ್ ವ್ಯವಸ್ಥೆ, 5-ಜಿ ತರಂಗಾಂತರಂಗ ವ್ಯವಸ್ಥೆ, ಜಮೀನು ಖರೀದಿಯ ಡಿಜಿಟಲೀಕರಣ, ವಸತಿ ಸೌಲಭ್ಯ, ಕೃಷಿ ಉನ್ನತೀಕರಣ ಸಹಿತ ಹಲವು ಕ್ರಮಗಳಿಗೆ ಈ ಬಾರಿಯ ಬಜೆಟ್ ಮುನ್ನುಡಿ ಬರೆದಿದೆ.
ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು ಮೀಸಲು..? ಇಲ್ಲಿದೆ ಅಂಕಿ-ಅಂಶ..
- 2022-23ನೇ ಸಾಲಿನೀ ಬಜೆಟ್ ಗಾತ್ರ 39.54 ಲಕ್ಷ ಕೋಟಿಗೆ ಏರಿಕೆಯಾಗಿದೆ.
- ರಾಷ್ಟ್ರೀಯ ಆರೋಗ್ಯ ಯೋಜನೆಗೆ 37,800 ಕೋಟಿ ರೂಪಾಯಿ ಅನುದಾನ.
- ಜಲ್ ಜೀವನ್ ಯೋಜನೆಗೆ 60,000 ಕೋಟಿ ರೂಪಾಯಿ ಮೀಸಲು.
- ರಾಷ್ಟ್ರೀಯ ಶಿಕ್ಷಣ ಯೋಜನೆಗೆ 39,553 ಕೋಟಿ ರೂಪಾಯಿ.
- ಪ್ರಧಾನ್ ಮಂತ್ರಿ ಗ್ರಾಮ ಸಡಖ್ ಯೋಜನೆಗೆ 190 ಕೋಟಿ ರೂಪಾಯಿ,
- ಪ್ರಧಾನ್ ಮಂತ್ರಿ ಕಿಸಾನ್ ಯೋಜನೆಗೆ 68,000 ಸಾವಿರ ಕೋಟಿ ರೂಪಾಯಿ.
- ಆತ್ಮನಿರ್ಭರ್ ಭಾರತ್ ರೋಜ್ಗಾರ್ ಯೋಜನೆಗೆ 6,400 ಕೋಟಿ ರೂಪಾಯಿ.
- ಪ್ರಧಾನ್ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಗೆ 10,000 ಕೋಟಿ ರೂಪಾಯಿ.
- ದೂರ ಸಂಪರ್ಕ ಇಲಾಖೆಗೆ 10,540.82 ಕೋಟಿ ರೂಪಾಯಿ.
- ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಗೆ 107715.38 ಕೋಟಿ ರೂಪಾಯಿ.
- ಕೃಷಿ ಮತ್ತು ರೈತರ ಅಭಿವೃದ್ಧಿಗೆ 132513.62 ಕೋಟಿ ರೂಪಾಯಿ.
- ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ 138203.63 ಕೋಟಿ ರೂಪಾಯಿ.
- ರೈಲ್ವೆ ಸಚಿವಾಲಯಕ್ಕೆ 140367.13 ಕೋ.ರೂ.,
- ಗೃಹ ವ್ಯವಹಾರಗಳ ಸಚಿವಾಲಯಕ್ಕೆ 185776.55 ಕೋ.ರೂ.,
- ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವಾಲಯಕ್ಕೆ 199107.71 ಕೋ. ರೂ.
- ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯ 217684.46 ಕೋ.ರೂ.
- ರಕ್ಷಣಾ ಸಚಿವಾಲಯಕ್ಕೆ 525166.16 ಕೋಟಿ ಅನುದಾನ.