ಉಡುಪಿ : ಕುಂದಾಪುರ ಸಮೀಪದ ಯಡಮೊಗೆಯ ಉದಯ ಗಾಣಿಗನನ್ನು ಬಿಜೆಪಿ ಮುಖಂಡ, ಪಂಚಾಯತ್ ಅಧ್ಯಕ್ಷ ಪ್ರಾಣೇಶ ಯಡಿಯಾಳ ಕಾರು ಹತ್ತಿಸಿ ಕೊಲೆ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ. ಈ ಪ್ರಕರಣದಲ್ಲಿ ನೊಂದ ಬಿಜೆಪಿ ಕಾರ್ಯಕರ್ತರ ನೆರವಿಗೆ ಸಂಸದೆ ಶೋಭಾ ಕರಂದ್ಲಾಜೆ ಧಾವಿಸುವರೇ ಎಂದು ಸ್ಥಳೀಯ ಕಾರ್ಯಕರ್ತರು ಎದುರು ನೋಡುತ್ತಿದ್ದಾರೆ.
ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯರಾದ ಶೋಭಾ ಕರಾಂದ್ಲಾಜೆಯವರು ಹಿಂದೆ ಕಾಂಗ್ರೇಸ್ ಸರ್ಕಾರವಿದ್ದಾಗ ಪಕ್ಕದ ಜಿಲ್ಲೆಯ, ಹೊನ್ನಾವರ ಪರೇಶ್ ಮೇಸ್ತನ ಸಾವಿನ ಸಂದರ್ಭದಲ್ಲಿ ಹೋರಾಟದ ಅಖಾಡಕ್ಕೆ ಧುಮುಕಿದ್ದರು ಹಿಂದೂ ಹುಲಿಯ ಹತ್ಯೆಯಾಗಿದೆ ಎನ್ನುತ್ತಾ ಕೊಲೆಯಾದ ಯುವಕನ ಕುಟುಂಬಕ್ಕೆ ನ್ಯಾಯ ಸಿಗಬೇಕೆಂದು ಹೋರಾಟ ನಡೆಸಿದ್ದರು. ಇದೀಗ ಇವರು ಪ್ರತಿನಿಧಿಸುತ್ತಿರುವ ಕ್ಷೇತ್ರದಲ್ಲೇ, ಅವರದ್ದೇ ಪಕ್ಷದ ಕಾರ್ಯಕರ್ತನ ಕೊಲೆಯಾಗಿದ್ದು ಈ ಪ್ರಕರಣದಲ್ಲೂ ಅವರು ಸೂಕ್ತ ಕ್ರಮ ಅನುಸರಿಸುವರೇ ಏಮಬುದನ್ನು ಬಿಜೆಪಿ ಕಾರ್ಯಕರ್ತರು ಎದುರು ನೋಡುತ್ತಿದ್ದಾರೆ.
ಈ ನಡುವೆ ಈ ಕೊಲೆ ಪ್ರಕರಣದಲ್ಲಿ ಬಿಜೆಪಿ ಕಾರ್ಯಕರ್ತರ ವಿರುದ್ದವೇ ಆರೋಪ ಕೇಳಿಬಂದಿರುವುದರಿಂದಾಗಿ ಶೋಭಾ ಕರಂದ್ಲಾಜೆಯವರು ಮೌನ ವಹಿಸದ್ದಾರೆಂದು ಸ್ಥಳೀಯ ಕಾರ್ಯಕರ್ತರು ಬೇಸರ ಹೊರಹಾಕಿದ್ದಾರೆ.
ಉದಯ ಗಾಣಿಗರನ್ನು ಬೇರೆ ಯಾವುದೊ ಪಕ್ಷದ ಕಾರ್ಯಕರ್ತ ಕೊಲೆ ಮಾಡಿದ್ದರೆ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿ ಉದಯ ಗಾಣಿಗರ ದೊಡ್ಡ ಬ್ಯಾನರ್ ಊರಿನಲ್ಲಿ ನಾಲ್ಕು ರಸ್ತೆ ಕೂಡುವಲ್ಲಿ ಹಾಕುತ್ತಿದ್ದರು. ಹಿಂದೂ ಹುಲಿ, ಧೀರ, ವೀರ ಎಂದೆಲ್ಲ ಗುಣಗಾನವಾಗುತ್ತಿತ್ತು. NIA ತನಿಖೆಗೆ ಆಗ್ರಹಿಸಲಾಗುತ್ತಿತ್ತು ಎಂದು ಮೃತನ ಸ್ನೇಹಿತರು ಅಸಮಾಧಾನ ಹೊರಹಾಕಿದ್ದಾರೆ. ಉದಯ ಗಾಣಿಗ ಅವರ ಕೊಲೆ ಆಗಿ ಇಷ್ಟು ದಿನವಾದರೂ ಶೋಭಕ್ಕ ಅವರ ಮನೆಗೆ ಭೇಟಿ ನೀಡಿಲ್ಲ, ಆ ಕುರಿತು ಒಂದು ಮಾತೂ ಮಾತಾಡಿಲ್ಲ ಎಂಬುದು ಈ ಯುವಕರ ಅಸಮಾಧಾನ. ಉದಯ ಗಾಣಿಗ ಶೋಭಕ್ಕನ್ನ ಮತದಾರ ಮತ್ತು ಅವರದೇ ಪಕ್ಷದ ಕಾರ್ಯಕರ್ತ. ಹಾಗಾಗಿ ಶೋಭಕ್ಕಾ ನ್ಯಾಯಕ್ಕಾಗಿ ನಡೆಯು ಹೋರಾಟದಲ್ಲಿ ಭಾಗಿಯಾಗುತ್ತಾರೆ ಎಂಬ ನಿರೀಕ್ಷೆಯನ್ನು ಸ್ಥಳೀಯ ಕಾರ್ಯಕರ್ತರು ವ್ಯಕ್ತಪಡಿಸಿದ್ದಾರೆ.