ವರದಿ: ರವಿಕುಮಾರ್, ದಾವಣಗೆರೆ
ದಾವಣಗೆರೆ: ಬಳಿ ನೀರು ತುಂಬಿದ ಪಾತ್ರೆಗೆ ಬಿದ್ದು ಎರಡು ವರ್ಷದ ವೇದ ಎಂಬ ಮಗು ಸಾವಿಗೀಡಾಗಿರುವ ಘಟನೆ ಜಗಳೂರು ಬಳಿ ಸಂಭವಿಸಿದೆ.
ಜಗಳೂರು ತಾಲೂಕಿನ ನಿಬಗೂರು ಗೊಲ್ಲರಹಟ್ಟಿ ಗ್ರಾಮದ ರಾಜೇಶ್ವರಿ ಮತ್ತು ಮಂಜುನಾಥ ಎಂಬವರ ಮೂವರು ಮಕ್ಕಳು ಮಂಗಳವಾರ ಬೆಳಗ್ಗೆ ಮನೆ ಮುಂದೆ ಆಡುತ್ತಿದ್ದರು. ಸ್ವಲ್ಪ ಹೊತ್ತಿನ ನಂತರ ವೇದಾ ಸ್ಥಳದಲ್ಲಿ ಇಲ್ಲದಿರುವುದನ್ನು ಗಮನಿಸಿದ ಮನೆಯವರು ಆತಂಕಗೊಂಡರು. ಹುಡುಕಾಟ ನಡೆಸಿದ ಸಂದರ್ಭದಲ್ಲಿ ಮನೆ ಹಿಂದಿನ ಬಚ್ಚಲು ಮನೆಯಲ್ಲಿ ನೀರು ತುಂಬಿದ ಪಾತ್ರೆಯಲ್ಲಿ ಬಿದ್ದಿದ್ದಳು. ಕೂಡಲೇ ಮಗುವನ್ನು ಸಮೀಪದ ಸರ್ಕಾರಿ ಕರೆದೊಯ್ಯಲಾಯಿತಾದರೂ ಅಷ್ಟರಲ್ಲೇ ಮೃತಪಟ್ಟಿದ್ದಳು ಎನ್ನಲಾಗಿದೆ.
ಆಟ ಆಡುತ್ತಾ ಆಡುತ್ತಾ ಮನೆಯ ಹಿಂದೆ ಬಚ್ಚಲು ಮನೆ ಕಡೆಗೆ ಹೋಗಿದ್ದ ಮಗು ಆಕಸ್ಮಿಕವಾಗಿ ಕಾಲು ಜಾರಿ ನೀರು ತುಂಬಿದ ಪಾತ್ರೆಗೆ ಬಿದ್ದಿದ್ದು, ಎದ್ದು ಬರಲಾಗದೇ ಮುಳುಗಿ ಮೃತಪಟ್ಟಿರಬಹುದು ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ನಡುವೆ, ಸುದ್ದಿ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಬಿ. ದೇವೇಂದ್ರಪ್ಪ ಬಾಲಕಿಯ ಹೆತ್ತವರಿಗೆ ಸಾಂತ್ವನ ಹೇಳಿದರು. ಮೃತರ ಕುಟುಂಬದವರಿಗೆ ಸಹಾಯದನ ನೀಡಿದರು.






















































