ತುಮಕೂರು: ಕಲ್ಪತರು ನಾಡಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸಾವನ್ನಪ್ಪದ್ದಾರೆ. ಮದುವೆ ಸಮಾರಂಭಕ್ಕೆ ತೆರಳಿದ್ದವರ ಪೈಕಿ ಕೆಲವು ದುರ್ದೈವಿಗಳು ಮಾರ್ಗ ಮಧ್ಯೆ ಜವರಾಯನ ಅಟ್ಟಹಾಸದಿಂದ ನಲುಗಿ ಮಸಣ ಸೇರುವಂತಾಯಿತು. ಹಲವರು ಗಾಯಗೊಂಡು ಆಸ್ಪತ್ರೆಪಾಲಾಗಿದ್ದಾರೆ.
ಮದುವೆ ಸಮಾರಂಭಕ್ಕೆಂದು ರಾತ್ತಿ ತೆರಳುತ್ತಿದ್ದವರ ಬಸ್ ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ. ಶಿರಾ ತಾಲೂಕು ಮೇಕೇರಳ್ಳಿ ಬಳಿ ಈ ಅಪಘಾತ ಸಂಭವಿಸಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಸುಮಾರು 20 ಜನರಿಗೆ ಗಂಭೀರ ಗಾಯಗಳಾಗಿವೆ.
ವಧುವಿನ ಮನೆಯಲ್ಲಿ ಇಂದು ಆರತಕ್ಷತೆ ಇತ್ತು. ಹಾಗಾಗಿ ಕೊರಟಗೆರೆ ತಾಲೂಕಿನ ಶಂಬೋನಹಳ್ಳಿಯಿಂದ ಶಿರಾ ತಾಲೂಕು ಬುಕ್ಕಾಪಟ್ಟಣ ಬಳಿಯ ಮಾಳಿಗೆಹಟ್ಟಿಗೆ ವರನ ಕುಟುಂಬಸ್ಥರು ಹಾಗೂ ಹಿತೈಷಿಗಳು ದಿಬ್ಬಣ ತೆರಳುತ್ತಿದ್ದರು. ಅದಾಗಲೇ ಮಾರ್ಗ ಮಧ್ಯೆ ಈ ಕರಾಳ ಘಟನೆ ಸಂಭವಿಸಿದೆ.
ಗಾಯಾಳುಗಳನ್ನ ಶಿರಾ ಸರ್ಕಾರಿ ಅಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಶಿರಾ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.