ಬೆಂಗಳೂರು: ತುಳುನಾಡಲ್ಲಿ, ಶ್ರದ್ಧಾ ಭಕ್ತಿಯಿಂದ ಆರಾಧಿಸುವ, ಗುಳಿಗ ದೈವವನ್ನು ಆಧರಿಸಿ, ರಚಿಸಿರುವ ಪೌರಾಣಿಕ ನಾಟಕದ ಬಗ್ಗೆ ಮೆಚ್ಚುಗೆ ಇದೆ ಹಾಗೂ ದೈವದ ಬಗ್ಗೆ ಅಪಾರ ಭಕ್ತಿ ಗೌರವವನ್ನು ಹೊಂದಿದ್ದೇನೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ರಂಗಭೂಮಿಯ ಮೇಲೆ, ಆಧುನಿಕ ತಂತ್ರಜ್ಞಾನ ವನ್ನು ಬಳಸಿಕೊಂಡು, ಯಶಸ್ವಿ ಪ್ರದರ್ಶನವನ್ನು ಕಲಾ ರಸಿಕರಿಗೆ ಪರಿಚಯಿಸುತ್ತಿ ರುವ, ಕಲಾವಿದರು ಹಾಗೂ ವಿಶೇಷವಾಗಿ, ನಿರ್ದೇಶಕ, ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರ ಸೃಜನಶೀಲತೆ ಬಗ್ಗೆ, ಅಭಿಮಾನ ಇದೆ ಎಂದವರು ಹೇಳಿದ್ದಾರೆ.
ದೈವದ ಅಭಯ ನುಡಿಯ ಅಚ್ಚರಿ..
ಈ ನಡುವೆ, ಕಾಕತಾಳೀಯ ಎಂಬಂತೆ, ಅರಗ ಜ್ಞಾನೇಂದ್ರ ಅವರಿಗೆ ಅಚ್ಚರಿಯ ಪ್ರಸಂಗ ಎದುರಾಗಿದೆ. ರಾಜಕೀಯ ಎದುರಾಳಿಗಳು ಆರಗ ಜ್ಞಾನೇಂದ್ರರನ್ನು ಟೀಕಿಸುತ್ತಿರುವಾಗಲೇ ದೈವಾರಾಧನೆಯ ಕಾರ್ಯಕ್ರಮದಲ್ಲಿ ಭಾಗಿಯಾದ ಸಚಿವರಿಗೆ, ‘ನಾನಿದ್ದೇನೆ ಭಯ ಪಡಬೇಡ’ ಎಂದು ದೈವವು ಅಭಯದ ನುಡಿಗಳನ್ನಾಡಿದ ಸನ್ನಿವೇಶ ನಡೆದಿದೆ.
ನೇಮೋತ್ಸವ ಕೈಂಕರ್ಯದಲ್ಲಿ ಭಾಗಿಯಾದ ಭಕ್ತರು ದೈವದ ಆಶೀರ್ವಾದ ಪಡೆಯುತ್ತಿದ್ದರು. ಆ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಸಚಿವ ಅರಗ ಜ್ಞಾನೇಂದ್ರ ಅವರನ್ನು ದಿಟ್ಟಿಸಿ ನೋಡಿದ ದೈವ ನರ್ತಕರು, ಸಚಿವರತ್ತ ಧಾವಿಸಿ ಅಭಯ ನೀಡಿದೆ. ‘ಬಾ ನಿನ್ನ ರಕ್ಷಣೆಗೆ ನಾನಿದ್ದೇನೆ’ ಎಂದು ಆ ದೈವ ಅಭಯ ನೀಡಿದೆ ಎಂದು ಭಕ್ತರು ಹೇಳಿಕೊಂಡಿದ್ದಾರೆ.