ವಿಟ್ಲ: ಮಣಿಪಾಲದ ಆರ್ವಿ ಟೂರ್ಸ್ ಎಂಡ್ ಟ್ರಾವೆಲ್ಸ್ ಮಾಲಕ ಪರ್ಕಳ ಸಮೀಪದ ಅಚ್ಚುತನಗರ ಗ್ಯಾಡ್ಸನ್ ನಿವಾಸಿ ಕರಿಂಕ ರಾಘವೇಂದ್ರ ಭಂಡಾರಿ (44) ವಿಧಿವಶರಾಗಿದ್ದಾರೆ. ಹೃದಯಾಘಾತಗೊಂಡು ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಫೆಬ್ರವರಿ 19 ರಂದು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಬಂಟ್ವಾಳದ ವಿಟ್ಲ ಕರಿಂಕ ಮಾಜಿ ಸೈನಿಕ ಕೆ.ಎನ್. ಶಾಂಭ ಭಂಡಾರಿಯವರ ಪುತ್ರ ರಾಘವೇಂದ್ರ ಭಂಡಾರಿ ಕಳೆದ 15 ವರ್ಷಗಳಿಂದ ಮಣಿಪಾಲದಲ್ಲಿ ಟ್ರಾವೆಲ್ಸ್ ಉದ್ಯಮ ನಡೆಸುತ್ತಿದ್ದರು.
ತುಳು ಭಾಷೆಯ ‘ಪೂವರಿ’ ಪತ್ರಿಕೆಯ ಪ್ರಥಮ ಖರೀಧಿದಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ರಾಘವೇಂದ್ರ ಭಂಡಾರಿಯವರು ಆ ಪತ್ರಿಕೆಯ ಪೋಷಕರಲ್ಲಿ ಒಬ್ಬರಾಗಿದ್ದರು. ಅವರು ತಾಯಿ, ಪತ್ನಿ, ಮಗು ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇಂದ್ರಾಳಿಯ ರುದ್ರ ಭೂಮಿಯಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ವಿವಿಧ ಕ್ಷೇತ್ರಗಳ ಪ್ರಮುಖರು ಪ್ರತೀವ ಶರೀರದ ಅಂತಿಮ ದರ್ಶನ ಪಡೆದು ಮೃತರಿಗೆ ಶ್ರದ್ದಾಂಜಲಿ ಸಮರ್ಪಿಸಿದರು.