ಬೆಂಗಳೂರು: ವಿದೇಶಗಳಿಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ನೀಡಲು ಮೋದಿ ಸರ್ಕಾರದ ಬಳಿ ಹಣವಿದೆ. ಆದರೆ ತನ್ನದೇ ದೇಶದ ಕರ್ನಾಟಕಕ್ಕೆ ಅನುದಾನ ನೀಡಲು ಹಣವಿಲ್ಲ ಎಂದು ಕಾಂಗ್ರೆಸ್ ದೂರಿದೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷ, ಮೋದಿ ಸರ್ಕಾರ ಈ ಬಾರಿ ಮಧ್ಯಂತರ ಬಜೆಟ್’ನಲ್ಲಿ ವಿದೇಶಗಳಿಗೆ ಘೋಷಿಸಿದ ಅನುದಾನದ ಬಗ್ಗೆ ಅಂಕಿಅಂಶಗಳನ್ನು ಹಂಚಿಕೊಂಡಿದೆ.
ಬೂತಾನ್ – ₹2398.97 ಕೋಟಿ
ಮಾಲ್ಡೀವ್ಸ್ – ₹770.90 ಕೋಟಿ
ನೇಪಾಳ – ₹2650 ಕೋಟಿ
ಮ್ಯಾನ್ಮಾರ್ – ₹2370 ಕೋಟಿ
ಮಾರಿಷಸ್ – ₹2330 ಕೋಟಿ
ಆಪಘಾನಿಸ್ತಾನ – ₹2220 ಕೋಟಿ
ಬಾಂಗ್ಲಾದೇಶ – ₹130 ಕೋಟಿ
ಶ್ರೀಲಂಕಾ – ₹60 ಕೋಟಿ
ಸೆಲಿಚೆಲ್ಲೆಸ್ – ₹29.91 ಕೋಟಿ
ಮಂಗೋಲಿಯಾ – ₹5 ಕೋಟಿ
ವಾರ್ಷಿಕ 4 ಲಕ್ಷ ಕೋಟಿ ಸಂಪನ್ಮೂಲವನ್ನು ಸಂಗ್ರಹಿಸಿ ಕೊಡುವ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಕೊಟ್ಟಿರುವ ಅನುದಾನ – ‘0’ ಎಂದು ಹೇಳಿರುವ ಕಾಂಗ್ರೆಸ್, ಕನ್ನಡಿಗರ ಬೆವರಿನ ಹಣವನ್ನು ಲಪಟಾಯಿಸಿ ವಿದೇಶಗಳಿಗೆ ಹರಿಸುತ್ತಿರುವುದನ್ನು ಪ್ರಶ್ನಿಸದೆ ಸುಮ್ಮನಿರಲು ಕನ್ನಡಿಗರು ಗುಲಾಮರಲ್ಲ ಎಂದಿದೆ.
ಈ ಬಾರಿಯ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ವಿದೇಶಗಳಿಗೆ ಘೋಷಿಸಿದ ಅನುದಾನ..
ಬೂತಾನ್ – ₹2398.97 ಕೋಟಿ
ಮಾಲ್ಡೀವ್ಸ್ – ₹770.90 ಕೋಟಿ
ನೇಪಾಳ – ₹2650 ಕೋಟಿ
ಮ್ಯಾನ್ಮಾರ್ – ₹2370 ಕೋಟಿ
ಮಾರಿಷಸ್ – ₹2330 ಕೋಟಿ
ಆಪಘಾನಿಸ್ತಾನ – ₹2220 ಕೋಟಿ
ಬಾಂಗ್ಲಾದೇಶ – ₹130 ಕೋಟಿ
ಶ್ರೀಲಂಕಾ – ₹60 ಕೋಟಿ
ಸೆಲಿಚೆಲ್ಲೆಸ್ – ₹29.91 ಕೋಟಿ…— Karnataka Congress (@INCKarnataka) February 4, 2024
































































