ಮಂಡ್ಯ: ಮೋಕ್ಷ ಪ್ರಾಪ್ತಿಗಾಗಿ ಕೈಂಕರ್ಯ ನಡೆಯುವ ಸ್ಥಳ ಎಂದೇ ಗುರುತಾಗಿರುವ ಕಾವೇರಿ ನದಿ ತೀರದ ಸ್ಥಳ, ಶ್ರೀರಂಗಪಟ್ಟಣ ಈ ಬಾರಿ ದಾಖಲೆಯ ಸನ್ನಿವೇಶಕ್ಕೆ ಸಾಕ್ಷಿಯಾಗಲಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಗಂಜಾಂ ಕಾವೇರಿ ನದಿ ತೀರದ ಗೋಸಾಯಿಘಾಟ್‌ನಲ್ಲಿ ಸೋಮವಾರ ಒಂದೇ ದಿನ ಸಾವಿರಾರು ಮಂದಿಯ ತಿಥಿ ಕೈಂಕರ್ಯ ನೆರವೇರಲಿದೆ.
ಪಿತೃಪಕ್ಷ ಸಂದರ್ಭದಲ್ಲಿ ಇಂತಹಾ ಕೈಂಕರ್ಯ ನೆರವೇರುವುದು ಸಂಪ್ರದಾಯಗಳಲ್ಲೊಂದು. ಆದರೆ ಈ ವರ್ಷ ಕೊರೋನಾ ಕಾರಣದಿಂದ ಭಾರೀ ಸಂಖ್ಯೆಯಲ್ಲಿ ಜನರು ಸಾವನ್ನಪ್ಪರುವುದರಿಂದ ಈ ಸ್ಥಳದಲ್ಲಿ ಮೃತರ ಸದ್ಗತಿಗಾಗಿ ಸಾಮೂಹಿಕ ತಿಥಿಕಾರ್ಯ ಏರ್ಪಡಿಸಲಾಗಿದೆ.
ಜಿಲ್ಲಾಡಳಿತವೇ ಇದಕ್ಕಾಗಿ ಸಕಲ ಸಿದ್ದತೆಗಳನ್ನು ಕೈಗೊಂಡಿದೆ. ಸೋಮವಾರದ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜನಪ್ರತಿನಿಧಿಗಳು ಗೋಸಾಯಿಘಾಟ್‌ಗೆ ತೆರಳಿ ಸಿದ್ಧತೆ ಗಳ ಪರಿಶಿಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾಹಿತಿ ಹಂಚಿಕೊಂಡ ಅಧಿಕಾರಿಗಳು, ಸೋಮವಾರದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಕಂದಾಯ ಸಚಿವ ಆರ್. ಅಶೋಕ್, ಸರ್ಕಾರದ ಪ್ರಧಾನ ಕಾರ್ಯದರ್ಶಿ ಮಂಜನಾಥ್ ಪ್ರಸಾದ್, ಮಂಡ್ಯ ಜಿಲ್ಲಾಧಿಕಾರಿ ಡಾ.ಅಶ್ವಥಿ ಸಹಿತ ಅಧಿಕಾರಿಗಳು, ಜನಪ್ರತಿನಿಧಿಗಳನೇಕರು ಭಾಗವಿಸಲಿದ್ದಾರೆ.