ಮುಂಬೈ: ಬಾಲಿವುಡ್ ಸ್ಟಾರ್ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿ ಮೂವರನ್ನು ಡ್ರಗ್ ಪಾರ್ಟಿ ಪ್ರಕರಣದಲ್ಲಿ ಎನ್‌ಸಿಬಿ.ತಂಡ ಬಂಧಿಸಿದೆ.
ಮುಂಬೈ ಸಮೀಪ ಸಮುದ್ರ ಮಧ್ಯದಲ್ಲಿ ವಿಲಾಸಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ನಡೆದಿದ್ದು ಅಲ್ಲಿಗೆ ಲಗ್ಗೆ ಹಾಕಿದ್ದ ಎನ್‌ಸಿಬಿ ತಂಡ ಡ್ರಗ್ಸ್ ದಂಧೆಯ ಕರಾಳತೆಯನ್ನು ಅನಾವರಣ ಮಾಡಿದೆ. ಡ್ರಗ್ ಪಾರ್ಟಿ ನಡೆಯುತ್ತಿದ್ದ ಹಡಗಿನ ಮೇಲೆ ಶನಿವಾರ ದಾಳಿ ನಡೆಸಿದ ಎನ್‌ಸಿಬಿ ಅಧಿಕಾರಿಗಳ ತಂಡ ಹಲವರನ್ನು ಬಂಧಿಸಿದೆ. ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್‌ನನ್ನೂ ವಶಕ್ಕೆ ಪಡೆದಿತ್ತು. ಸುದೀರ್ಘ ವಿಚಾರಣೆ ನಂತರ ಆರ್ಯನ್ ಅವರನ್ನು ಬಂಧಿಸಲಾಗಿದೆ ಎಂದು ಸುದ್ದಿಸಂಸ್ಥೆ ವರದಿ ತಿಳಿಸಿದೆ.
#WATCH | Mumbai: Three of the eight detained persons, in connection with the raid at a party at a cruise off the Mumbai coast, were being taken for the medical test by NCB pic.twitter.com/JVAYF6fMb5
— ANI (@ANI) October 3, 2021
‘ದಿ ಎಂಪ್ರಸ್’ ಎಂಬ ಹಡಗು ಶನಿವಾರ ರಾತ್ರಿ ಮುಂಬೈನಿಂದ ಗೋವಾಕ್ಕೆ ತೆರಳುತ್ತಿತ್ತು. ಈ ಹಡಗಿನೊಳಗೆ ಡ್ರಗ್ಸ್ ಪಾರ್ಟಿ ನಡೆಸಲಾಗುತ್ತಿತ್ತು. ಈ ಡ್ರಗ್ ಪಾರ್ಟಿ ಬಗ್ಗೆ ಸುಳಿವು ಅರಿತ ರಾಷ್ಟ್ರೀಯ ಮಾದಕ ದ್ರವ್ಯ ನಿಯಂತ್ರಣ ಮಂಡಳಿ (ಎನ್‌ಸಿಬಿ) ಅಧಿಕಾರಿಗಳು ದಾಳಿ ನಡೆಸಿ ಬರೋಬ್ಬರಿ ಹತ್ತು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರೆಲ್ಲರೂ ಹೈ ಪ್ರೊಫೈಲ್ ವ್ಯಕ್ತಿಗಳು ಎನ್ನಲಾಗಿದೆ. ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಪುತ್ರ ಕೂಡಾ ಈ ರೇವ್ ಪಾರ್ಟಿಯಲ್ಲಿದ್ದ ಎನ್ನಲಾಗಿದೆ.
ಈ ನಡುವೆ ಸುಮಾರು ಮೂರು ತಾಸುಗಳ ವಿಚಾರಣೆ ನಂತರ ಆರ್ಯನ್ ಖಾನ್ ಸಹಿತ ಮೂವರನ್ನು ಎನ್‌ಸಿಬಿ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.