ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ಹಾಸ್ಯ ನಟ ಮಯಿಲ್ ಸ್ವಾಮಿ ವಿಧಿವಶರಾಗಿದ್ದಾರೆ. 57 ವರ್ಷ ಹರೆಯದ ಅವರು ಭಾನುವಾರ ಮುಂಜಾನೆ ನಿಧನರಾಗಿದ್ದಾರೆ.
ಹೃದಯಾಘಾತಕ್ಕೊಳಗಾದ ಮಯಿಲ್ ಸ್ವಾಮಿ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂಧಿಸದೆ ಅವರು ಕೊನೆಯುಸಿರೆಳೆದರು ಎಂದು ಮೂಲಗಳು ತಿಳಿಸಿವೆ.
ಕಮಲ್ ಹಾಸನ್ ಅಭಿನಯದ ʼಅಪೂರ್ವ ಸಾಗೋಧರರ್ಗಲ್ʼ, ʼಮೈಕೆಲ್ ಮದನ ಕಾಮ ರಾಜನ್ʼ ಮೊದಲಾದ ಹಿಟ್ ಸಿನಿಮಾಗಳಲ್ಲು ನಟಿಸಿ ಗಮನಸೆಳೆದಿದ್ದರು. ಹಲವಾರು ಸಿನಿಮಾಗಳಲ್ಲಿ ಅವರ ನಟನೆ ಚಿತ್ರ ರಸಿಕರ ಮೆಚ್ಚುಗೆಗೆ ಪಾತ್ರವಾಗಿತ್ತು.