ಬೆಂಗಳೂರು: ಸರ್ಕಾರದ ವಿರುದ್ದ ಸಮರ ಸಾರಿರುವ ಕಬ್ಬು ಬೆಳೆಗಾರರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅಹೋರಾತ್ರಿ ಸತ್ಯಾಗ್ರಹವನ್ನು ಮುಂದುವರಿಸಿದ್ದಾರೆ.
ರಾಜ್ಯ ಕಬ್ಬು ಬೆಳೆಗಾರ ಸಂಘದ ನೇತೃತ್ವದಲ್ಲಿ
10ನೇ ದಿನದ ಆಹೋರಾತ್ರಿ ಧರಣಿ ಮುಂದುವರಿಸಿದ ರೈತರು, ‘ನಾವು ಅನ್ನದಾತರು ಬಿಕ್ಷುಕರಲ್ಲ’ ಎಂದು ಬಿಕ್ಷಾ ತಟ್ಟೆ ಹಿಡಿದು ಆಣಕ ಚಳುವಳಿ ನಡೆಸಿದರು. ಕಬ್ಬು ಎಫ್ ಆರ್ ಪಿ ದರ ಎರಿಕೆ, ಕಬ್ಬಿನಿಂದ ಬರುವ ಉಪ ಉತ್ಪನ್ನಗಳ ಲಾಭ ಹಂಚಿಕೆ ಮಾಡಬೇಕು ಎಂದು ಬೆಳೆಗಾರರು ಪುನರುಚ್ಛರಿಸಿದರು.
ಕಬ್ಬು ಹೆಚ್ಚುವರಿ ದರ ನಿಗದಿ ಬಗ್ಗೆ ರಾಜ್ಯ ಸರ್ಕಾರ ನಾಲ್ಕಾರು ಸಭೆಗಳನ್ನು ನಡೆಸಿ, ತಜ್ಞರ ಸಮಿತಿ ರಚಿಸಿ ಐದು ದಿನದಲ್ಲಿ ವರದಿ ಪಡೆದು ಯಾವುದೇ ನಿರ್ಧಾರ ಪ್ರಕಟಿಸಿದೆ ಇರುವುದನ್ನು ಖಂಡಿಸಿದರು. ರೈತರಿಗೆ ನ್ಯಾಯ ನೀಡುವುದಾಗಿ ಭರವಸೆ ನೀಡಿ ವಿಳಂಬ ನೀತಿ ಅನುಸರಿಸುತ್ತಿರುವುದು ಸರಿಯಲ್ಲ ಎಂದು ಹೋರಾಟ ಹಮ್ಮಿಕೊಳ್ಳಲಾಗಿದೆ ರೈತರ ಬದುಕು ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣಸಂಕಟ ಎನ್ನುವಂತಾಗಿದೆ ಎಂದು ಸತ್ಯಾಗ್ರಹ ನಿರತರು ಗಮನಸೆಳೆದರು.
ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷರಾದ ರೈತರತ್ನ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ನಡೆದ ಈ ಹೋರಾಟ ನಾಡಿನ ಗಮನಸೆಳೆಯಿತು.
ರಾಜ್ಯದಲ್ಲಿ 30 ಲಕ್ಷ ಕಬ್ಬು ಬೆಳೆಗಾರರು 7-50 ಕೋಟಿ ಟನ್ ಕಬ್ಬು ಬೆಳೆದು 78 ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ನೀಡಿ, ಕಬ್ಬು ಬೆಳೆದ ರೈತ ಬಿಕ್ಷುಕರಾಗುತ್ತಿದ್ದಾನೆ, ರೈತರ ಮತ ಭಿಕ್ಷೆ ಬೇಡುವ ಸರ್ಕಾರ ರೈತರ ಮೂಗಿಗೆ ತುಪ್ಪ ಸವರೋ ಕೆಲಸ ಮಾಡುತ್ತಿದ್ದಾರೆ , ವರ್ಷದಲ್ಲಿ 30000 ಕೋಟಿ ವೈಹಿವಾಟು ನಡೆಸುವ ರಾಜ್ಯ ಸರ್ಕಾರಕ್ಕೆ 5000 ಕೋಟಿ ತೆರಿಗೆ ಬರುತ್ತಿದೆ ಆದರೂ ನಿರ್ಲಕ್ಷತನ ತೋರುತ್ತಿದೆ ಎಂದು ಕುರುಬೂರು ಶಾಂತಕುಮಾರ್ ದೂರಿದರು.
ಕಬ್ಬು ಬೆಳೆಗಾರರು ನಿರಂತರ ಹೋರಾಟ ನಡೆಸುತ್ತಿದ್ದರು ಸರ್ಕಾರ ಯಾವುದೇ ಸ್ಪಷ್ಟ ತೀರ್ಮಾನ ಕೈಗೊಳ್ಳದೆ, ಪೂಲಿಸರ್ ಬಲದಿಂದ ಭಂಡತನ ಪ್ರದರ್ಶಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದ ರೈತರು, ಕರ್ನಾಟಕ ರಾಜ್ಯಕ್ಕಿಂತ ಕಡಿಮೆ ಸಕ್ಕರೆ ಇಳುವರಿ ಬರುವ ಪಂಜಾಬ್ ರಾಜ್ಯದಲ್ಲಿ 3800 ಉತ್ತರ ಪ್ರದೇಶದಲ್ಲಿ 3500 ಮಹಾರಾಷ್ಟ್ರದಲ್ಲಿ 3,200 ಗುಜರಾತ್ ನಲ್ಲಿ 4400 ದರ , ತಮಿಳುನಾಡಿನಲ್ಲಿ ಕಬ್ಬು ಸಾಗಾಣಿಕೆ ವೆಚ್ಚವನ್ನು ಕಾರ್ಖಾನೆಗಳೆ ಬರಿಸುವ ನಿಯಮ ಜಾರಿಯಲ್ಲಿದೆ ,ಆಯಾ ರಾಜ್ಯ ಸರ್ಕಾರಗಳೇ ಹೆಚ್ಚುವರಿ ದರ ನಿಗದಿ ಮಾಡಿದ್ದಾರೆ, ಕರ್ನಾಟಕದಲ್ಲಿ ಮಾತಿನ ಮೂಲಕ ರೈತರಿಗೆ ಸಿಹಿ ನೀಡುತ್ತಿದ್ದಾರೆ ಎಂದು ರೈತ ಮುಖಂಡರು ದೂರಿದರು.
ಕಬ್ಬಿನ ಕಟಾವು ಸಾಗಾಣಿಕೆ ವೆಚ್ಚದಲ್ಲಿ ಕಾರ್ಖಾನೆಯವರು ರೈತರಿಂದ ಲಗಾಣಿ ಹೆಚ್ಚು ಪಡೆಯುತ್ತಿದ್ದಾರೆ ಕಬ್ಬು ಕಟಾವು 16 ತಿಂಗಳಾಗುತ್ತಿದೆ, ಸಕ್ಕರೆ ಕಾರ್ಖಾನೆಗಳು ಮನಬಂದಂತೆ ಕಟಾವು ಸಾಗಾಣಿಕೆ ವೆಚ್ಚ ಏರಿಕೆ ಮಾಡಿದ್ದಾರೆ, ಈ ಬಗ್ಗೆ ಆಯಾ ಜಿಲ್ಲಾಧಿಕಾರಿಗಳು ಕಾರ್ಖಾನೆಗಳ ಮೇಲೆ ಚೀಟಿಂಗ್ ಕೇಸ್ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು, ಸೋಲಿಗೆ ತಪ್ಪಿಸಬೇಕು ಎಂದು ಆಗ್ರಹಿಸಿದರು.
ಕಬ್ಬು ಕಟಾವು16-18 ತಿಂಗಳು ವಿಳಂಬವಾಗುತ್ತಿದೆ ಈ ರೀತಿ ಕಟಾವು ಮಾಡಿದ ಕಬ್ಬಿಗೆ ವಿಳಂಬದ ಅವಧಿ ಹಣಕೆ ಬಡ್ಡಿ ಸೇರಿಸಿ ಹೆಚ್ಚುವರಿ ದರ ಕೊಡಬೇಕು. ಬಗರ್ ಹುಕುಂ ಸಾಗುವಳಿ ಹತ್ತಾರು ವರ್ಷಗಳಿಂದ ಕೃಷಿ ಮಾಡುತ್ತಿರುವ ರೈತರಿಗೆ ಸಾಗುವಳಿ ಪತ್ರ,ಅರಣ್ಯ ಭೂಮಿಯನ್ನು ವ್ಯವಸಾಯ ಮಾಡುತ್ತಿರುವ ರೈತರಿಗೆ ಸಾಗುವಳಿ ಪಟ್ಟಾವನ್ನು ನೀಡಬೇಕು. ಕಾಡಂಚಿನಲ್ಲಿ ಪ್ರಾಣಿಗಳ ಹಾವಳಿ ತಪ್ಪಿಸಿ, ಕಾಡು ಪ್ರಾಣಿಗಳಿಂದ ಆಗುವ ಬೆಳೆ ಹಾನಿ ಪರಿಹಾರ ವೈಜ್ಞಾನಿಕವಾಗಿ ನಷ್ಟವನ್ನು ಭರಿಸಿಸಭೇಕು ಎಂದು ಹಕ್ಕೊತ್ತಾಯ ಮಂಡಿಸಿದರು.
ಸುರೇಶ್ ಮ ಪಾಟೀಲ್, ಅತ್ತಹಳ್ಳಿ ದೇವರಾಜ್, ಆಶೋಕಮೇಟಿ, ಗಜೇಂದ್ರ ಸಿಂಗ್, ದೇವರಾಜ್, ಬರಡನಪುರ ನಾಗರಾಜ್, ವೆಂಕಟಲಕ್ಷ್ಮಿ, ದೇವಮಣ್ಣಿ, ಕೆಂಡಗಣಸ್ವಾಮಿ ಸಹಿತ ರೈತ ಮುಖಂಡರನೇಕರು ಹೋರಾಟದಲ್ಲಿ ಭಾಗಿಯಾಗಿದ್ದರು.