ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಪುಣ್ಯಕೋಟಿ’ ಯೋಜನೆಯ ಪ್ರಚಾರಕ್ಕಾಗಿ ನಟ ಕಿಚ್ಚ ಸುದೀಪ್ ಅವರನ್ನು ರಾಯಭಾರಿಯನ್ನಾಗಿ ರಾಜ್ಯ ಸರ್ಕಾರ ನೇಮಕ ಮಾಡಿದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚೌಹಾನ್ ತಿಳಿಸಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಗೋವುಗಳ ಸಂರಕ್ಷಣೆಯಲ್ಲಿ ಜನರ ಪಾಲುದಾರಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಜಾರಿಮಾಡಲಾದ ನಮ್ಮ ಇಲಾಖೆಯ ಪುಣ್ಯಕೋಟಿ ದತ್ತು ಯೋಜನೆಯನ್ನು ಪ್ರಚುರಪಡಿಸಲು & ಉತ್ತೇಜಿಸಲು ನಟ, ನಿರ್ದೇಶಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರನ್ನು ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ .
ಗೋವುಗಳ ಸಂರಕ್ಷಣೆಯಲ್ಲಿ ಜನರ ಪಾಲುದಾರಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಜಾರಿಮಾಡಲಾದ ನಮ್ಮ ಇಲಾಖೆಯ ಪುಣ್ಯಕೋಟಿ ದತ್ತು ಯೋಜನೆಯನ್ನು ಪ್ರಚುರಪಡಿಸಲು & ಉತ್ತೇಜಿಸಲು ನಟ, ನಿರ್ದೇಶಕ ಅಭಿನಯ ಚಕ್ರವರ್ತಿ @KicchaSudeep ಅವರನ್ನು ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದ್ದು, ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸುತ್ತೇನೆ.(1/3) pic.twitter.com/syOOXUA4oX
— Prabhu Bhamla Chavan (@PrabhuChavanBJP) September 2, 2022
ಗೋವುಗಳನ್ನು ಸಂರಕ್ಷಿಸುವ ಈ ಸತ್ಕಾರ್ಯಕ್ಕೆ ಕೈಜೋಡಿಸಿರುವ ಸುದೀಪ್ ಅವರು ಇದಕ್ಕಾಗಿ ಯಾವುದೇ ಸಂಭಾವನೆ ಪಡೆಯದಿರಲು ತಿಳಿಸಿರುತ್ತಾರೆ. ಅವರ ಈ ನಿರ್ಧಾರ ಗೋವುಗಳ ಮೇಲಿನ ಕಾಳಜಿ ಹಾಗೂ ಹೃದಯ ಶ್ರೀಮಂತಿಕೆಯನ್ನು ತೋರಿಸುತ್ತಿದೆ. ಇವರನ್ನು ಆದರ್ಶವಾಗಿರಿಸಿಕೊಂಡು ಕಲಾವಿದರು, ಅಭಿಮಾನಿಗಳು ಹಾಗೂ ಶ್ರೀಸಾಮಾನ್ಯರು ನಮ್ಮ ಈ ಪುಣ್ಯಕೋಟಿ ಯೋಜನೆಯ ಯಶಸ್ಸಿಗೆ ಕೈಜೋಡಿಸುವಂತಾಗಲಿ ಎಂದು ಅವರು ವಿಶ್ವಾಸ ವ್ಯಕಪಡಿಸಿದ್ದಾರೆ.




















































