ಬಾನಂಗಳವಿಂದು ಅಪೂರ್ವ ವಿಸ್ಮಯಕ್ಕೆ ಸಾಕ್ಷಿಯಾಯಿತು. ಆಗಸದಲ್ಲಿ ಸೂರ್ಯನಿಗೆ ದಿಗ್ಬಂಧನ ಹಾಕಲಾಗಿತ್ತೇ? ಅಥವಾ ಸೂರ್ಯನಿಗೆ ಅಲಂಕಾರ ಮಾಡಲಾಗಿತ್ತೇ ಗೊತ್ತಿಲ್ಲ. ರವಿಯ ಸುತ್ತ ಕಾಮನಬಿಲ್ಲಿನ ಚಿತ್ತಾರ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿತ್ತು.
ಕಾಮನಬಿಲ್ಲಿನ ವರ್ಣ ಚಿತ್ತಾರವು ಬಾನಂಗಳದಲ್ಲಿ ಮೂಡುವುದು ಸಾಮಾನ್ಯ. ಇದು ವೈಚಿತ್ರ್ಯವಲ್ಲ, ಸ್ವಾಭಾವಿಕ ಚಿತ್ತಾರ. ಆದರೆ ಇಂದಿನ ಆಗಸದಲ್ಲಿನ ವೈಖರಿ ವಿಭಿನ್ನವಗಿತ್ತು. ಅಪರೂಪದಲ್ಲಿ ಅಪರೂಪವೇ ಎಂಬಂತಿತ್ತು ಈ ದೃಶ್ಯಕಾವ್ಯ.
ಕರಾವಳಿ, ಮಲೆನಾಡು, ಬಯಲುಸೀಮೆ ಜನರು ಆಗಾಗ್ಗೆ ಇಂತಹಾ ಸನ್ನಿವೇಶಗಳನ್ಬು ಕಾಣಿತ್ತಿರುತ್ತಾರೆ. ಆದರೆ ಇಂದು ಬೆಂಗಳೂರು ಸುತ್ತಮುತ್ತಲ ಜನರಿಗೆ ಕಾಣಸಿಕ್ಕಿದ ಈ ಸನ್ನಿವೇಶ ಅಚ್ಚರಿಗೆ ಕಾರಣವಾಯಿತು.
ಇದನ್ನು ಕಂಡು ಪುಳಕಿತರಾದ ಜನ ಫೊಟೋಗಳನ್ನು ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಖುಷಿಪಟ್ಟರು. ಬಹುತೇಕ ಮಂದಿಯ ವಾಟ್ಸಪ್ ಸ್ಟೇಟಸ್‌ಗಳಲ್ಲೂ ಇದೇ ಚಿತ್ತಾರ ಪ್ರತಿಬಿಂಭಿಸಿತ್ತು.