ಬೆಂಗಳೂರು: ಹಕ್ಕುಪತ್ರ ಕೇಳಲು ಬಂದ ಮಹಿಳೆಗೆ ಕಪಾಳಮೋಕ್ಷ ಮಾಡಿದ್ದಾರೆಂಬ ಆರೋಪಕ್ಕೆ ಗುರಿಯಾಗಿರುವ ಸಚಿವ ವಿ.ಸೋಮಣ್ಣ ತಲೆದಂಡಕ್ಕೆ ಪ್ರತಿಪಕ್ಷ ಕಾಂಗ್ರೆಸ್ ಪಟ್ಟು ಹಿಡಿದಿದೆ.
ಸೋಮಣ್ಣ ಅವರು ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆನ್ನಲಾದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಸಚಿವರ ವರ್ತನೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
Chamarajanar: Karnataka housing minister and district in-charge V Somanna slaps a woman while she approached him on stage to express her grievances. pic.twitter.com/5bnsfcsonS
— Pinky Rajpurohit 🇮🇳 (@Madrassan_Pinky) October 23, 2022
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಸಿಎಂ ಬಸವರಾಜ್ ಅವರನ್ನೂ ತರಾಟೆಗೆ ತೆಗೆದುಕೊಂಡಿದೆ. “ನಿಮ್ಮ ಸರ್ಕಾರ ಮಹಿಳೆಯರನ್ನು ಗೌರವಿಸುವುದೇ ಆದರೆ, ನಿಮ್ಮ ಆಡಳಿತವು ಮಹಿಳೆಯರಿಗೆ ಸುರಕ್ಷತೆ ನೀಡಲು ಬದ್ಧವಾಗಿದ್ದರೆ, ನಿಮ್ಮ ಪಕ್ಷವು ನಿಜಕ್ಕೂ ಮಹಿಳೆಯರ ಮೇಲೆ ಗೌರವ ಹೊಂದಿರುವುದೇ ಆದರೆ ಕೂಡಲೇ ಸಚಿವ ವಿ. ಸೋಮಣ್ಣರನ್ನು ವಜಾಗೊಳಿಸಿ ಅದನ್ನು ಸಾಬೀತುಪಡಿಸಿ ಎಂದು ಕಾಂಗ್ರೆಸ್ ಪಕ್ಷವು ಸಿಎಂ ಅವರಿಗೆ ಸವಾಲು ಹಾಕಿದೆ.
ಸಿಎಂ @BSBommai ಅವರೇ,
ನಿಮ್ಮ ಸರ್ಕಾರ ಮಹಿಳೆಯರನ್ನು ಗೌರವಿಸುವುದೇ ಆದರೆ,ನಿಮ್ಮ ಆಡಳಿತವು ಮಹಿಳೆಯರಿಗೆ ಸುರಕ್ಷತೆ ನೀಡಲು ಬದ್ಧವಾಗಿದ್ದರೆ,
ನಿಮ್ಮ ಪಕ್ಷವು ನಿಜಕ್ಕೂ ಮಹಿಳೆಯರ ಮೇಲೆ ಗೌರವ ಹೊಂದಿರುವುದೇ ಆದರೆ ಕೂಡಲೇ ಸಚಿವ ವಿ. ಸೋಮಣ್ಣರನ್ನು ವಜಾಗೊಳಿಸಿ ಅದನ್ನು ಸಾಬೀತುಪಡಿಸಿ.#SayCM #ಮಹಿಳಾವಿರೋಧಿಬಿಜೆಪಿ
— Karnataka Congress (@INCKarnataka) October 23, 2022
ರೈತರು ಗೊಬ್ಬರ ಕೇಳಿದರೆ ಗುಂಡೇಟು ಕೊಡ್ತಾರೆ, ಯುವಕರು ನೌಕರಿ ಕೇಳಿದರೆ ಲಾಠಿ ಏಟು ಕೊಡ್ತಾರೆ. ಮಹಿಳೆಯರು ಸೌಲಭ್ಯ ಕೇಳಿದರೆ ಕಪಾಳಮೋಕ್ಷ ಮಾಡ್ತಾರೆ. ಇದು 40% ಸರ್ಕಾರ ಜನಸಾಮಾನ್ಯರಿಗೆ ನೀಡುವ ಕೊಡುಗೆಗಳು. ದೇಶದ ಉದ್ದಕ್ಕೂ ಬಿಜೆಪಿಯಲ್ಲಿ ಮಹಿಳಾ ಪೀಡಕರೇ ಸೇರಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿ ಬಿಜೆಪಿ ಪಕ್ಷದ ಬಗ್ಗೆ ವ್ಯಂಗ್ಯವಾಡಿದೆ.
◆ರೈತರು ಗೊಬ್ಬರ ಕೇಳಿದರೆ ಗುಂಡೇಟು ಕೊಡ್ತಾರೆ.
◆ಯುವಕರು ನೌಕರಿ ಕೇಳಿದರೆ ಲಾಠಿ ಏಟು ಕೊಡ್ತಾರೆ.
◆ಮಹಿಳೆಯರು ಸೌಲಭ್ಯ ಕೇಳಿದರೆ ಕಪಾಳಮೋಕ್ಷ ಮಾಡ್ತಾರೆ
ಇದು #40PercentSarkara ಜನಸಾಮಾನ್ಯರಿಗೆ ನೀಡುವ ಕೊಡುಗೆಗಳು.
ದೇಶದ ಉದ್ದಕ್ಕೂ ಬಿಜೆಪಿಯಲ್ಲಿ ಮಹಿಳಾ ಪೀಡಕರೇ ಸೇರಿಕೊಂಡಿದ್ದಾರೆ.#ಮಹಿಳಾವಿರೋಧಿಬಿಜೆಪಿ
— Karnataka Congress (@INCKarnataka) October 23, 2022
ಮಹಿಳಾ ವಿರೋಧಿ ಬಿಜೆಪಿ ನಡೆಸಿದ ದೌರ್ಜನ್ಯ ಒಂದೆರಡಲ್ಲ. ಶಾಸಕ ಸಿದ್ದು ಸವದಿಯವರಿಂದ ಮಹಿಳೆಯ ಮೇಲೆ ಹಲ್ಲೆ, ರಮೇಶ್ ಜಾರಕಿಹೊಳಿ ಪ್ರಕರಣ ಎಲ್ಲರಿಗೂ ತಿಳಿದ ವಿಚಾರ. ಮಹಿಳೆಯರಿಗೆ ಮಾಧುಸ್ವಾಮಿ, ಅರವಿಂದ್ ಲಿಂಬಾವಳಿ ಕೂಡಾ ನಿಂದಿಸಿದ್ದರು. ಈಗ ವಿ.ಸೋಮಣ್ಣರಿಂದ ಹಲ್ಲೆ ನಡೆದಿದೆ ಎಂದಿರುವ ಕಾಂಗ್ರೆಸ್, ಬಿಜೆಪಿಗರಿಗೆ ರಾಮನಷ್ಟೇ ಅಲ್ಲ, ರಾವಣನ ಹೆಸರನ್ನೂ ಹೇಳುವ ಯೋಗ್ಯತೆ ಇಲ್ಲ ಎಂದು ಟೀಕಿಸಿದೆ.
#ಮಹಿಳಾವಿರೋಧಿಬಿಜೆಪಿ ನಡೆಸಿದ ದೌರ್ಜನ್ಯ ಒಂದೆರಡಲ್ಲ.
◆ಶಾಸಕ ಸಿದ್ದು ಸವದಿಯವರಿಂದ ಮಹಿಳೆಯ ಮೇಲೆ ಹಲ್ಲೆ
◆ರಮೇಶ್ ಜಾರಕಿಹೊಳಿ ಪ್ರಕರಣ ಎಲ್ಲರಿಗೂ ತಿಳಿದ ವಿಚಾರ
◆ಮಹಿಳೆಯರಿಗೆ ನಿಂದಿಸಿದ್ದರು ಮಾಧುಸ್ವಾಮಿ, ಅರವಿಂದ್ ಲಿಂಬಾವಳಿ
◆ಈಗ ವಿ.ಸೋಮಣ್ಣರಿಂದ ಹಲ್ಲೆಬಿಜೆಪಿಗರಿಗೆ ರಾಮನಷ್ಟೇ ಅಲ್ಲ, ರಾವಣನ ಹೆಸರನ್ನೂ ಹೇಳುವ ಯೋಗ್ಯತೆ ಇಲ್ಲ. pic.twitter.com/SkpEsJ6xH2
— Karnataka Congress (@INCKarnataka) October 23, 2022
ಇದೇ ವೇಳೆ, ಅತ್ತ ಪ್ರಧಾನಿಯವರು ಮಹಿಳೆಯರ ರಕ್ಷಣೆ ಬಗ್ಗೆ ಮಾತನಾಡುತ್ತಾರೆ, ಇತ್ತ ಕರ್ನಾಟಕ ಸರ್ಕಾರದ ಸಚಿವರು ಮಹಿಳೆಯರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಎಐಸಿಸಿ ನಾಯಕ ರಣದೀಪ್ ಸಿಂಗ್ ಸುರ್ಜೀವಾಲ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಕೆಣಕಿದ್ದಾರೆ. ಮಹಿಳೆಯ ಮೇಲೆ ದೌರ್ಜನ್ಯ ನಡೆಸಿರುವ ಸಚಿವ ಸೋಮಣ್ಣ ಅವರನ್ನು ಸಿಎಂ ಬೊಮ್ಮಾಯಿ ಅವರು ವಜಾ ಮಾಡಬೇಕೆಂದು ಸುರ್ಜೀವಾಲ ಆಗ್ರಹಿಸಿದ್ದಾರೆ.
The New Gem of Bommai Govt….
BJP Minister slaps a hapless women.
She falls on the ground.
Instead of apologising for the shameless act, Minister V. Somanna makes Police throw her out.
This is the unbridled arrogance of BJP.
Dismiss Minister, V. Somanna.👇#AntiWomenBJP pic.twitter.com/vLSofKOiZk
— Randeep Singh Surjewala (@rssurjewala) October 23, 2022


















































