ಬೆಂಗಳೂರು: ಮಹಾಶಿವರಾತ್ರಿ ಅಂಗವಾಗಿ ನಾಡಿನ ದೇಗುಲಗಳಲ್ಲಿ ವಿಶೇಷ ಮಹೋತ್ಸವದ ಕೈಂಕರ್ಯಗಳು ನಡೆದಿದ್ದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿರುವ ಶಿವ ದೇವಾಲಯಕ ತೆರಳಿ ಪೂಜೆ ನೆರವೇರಿಸಿದರು.
ಚಾಮರಾಜಪೇಟೆಯ ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಶಾಸಕ ಜಮೀರ್ ಅಹಮದ್ ಕೂಡಾ ಸಿದ್ದರಾಮಯ್ಯರ ಜೊತೆ ದೇಗುಲಕ್ಕೆ ಭೇಟಿನೀಡಿ ದೇವರ ದರ್ಶನ ಪಡೆದರು.