ಬೆಂಗಳೂರು: ಕರುನಾಡು ಕೂಡಾ ಕೊರೋನಾ ಸೋಂಕು ಉಲ್ಬಣದಿಂದ ತತ್ತರಗೊಂಡಿದೆ. ಸೋಂಕು ನಿಯಂತ್ರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಲಾಕ್‌ಡೌನ್ ಮಾದರಿಯ ಕಠಿಣ ನಿಯಮ ಜಾರಿಗೊಳಿಸಿದೆ.
ಪ್ರಸ್ತುತ ಕನ್ಬಡ ಚಿತ್ರೋದ್ಯಮವೂ ಸ್ಥಬ್ದಗೊಂಡಿವೆ. ಶೂಟಿಂಗ್ ಪ್ರಕ್ರಿಯೆಗಳೂ ನಿಂತಿದ್ದು ಚಿತ್ರೋದ್ಯಮದ ಮಂದಿ ಸಂಕಷ್ಟಕ್ಕೊಳಗಾಗಿದ್ದಾರೆ. ಇದೀಗ ಸಂಕಟದಲ್ಲಿರುವ ಸ್ಯಾಂಡಲ್‌ವುಡ್ ಮಂದಿಯ ನೆರವಿಗೆ ಹಲವು ಮಂದಿ ತಾರೆಯರು ಧಾವಿಸಿದ್ದಾರೆ.. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಶಾಸ್ತ್ರೀ ಚಿತ್ರದಲ್ಲಿ ನಟಿಸಿದ್ದ ಮಾನ್ಯ ಕೂಡಾ ಸಹಾಯಹಸ್ತ ಚಾಚಿದ್ದಾರೆ. ಮದುವೆಯಾಗಿ ಅಮೆರಿಕಾದಲ್ಲಿ ನೆಲೆಸಿರುವ ನಟಿ ಮಾನ್ಯ ಅವರು ರಿಯಲ್ ಸ್ಟಾರ್ ಉಪೇಂದ್ರ ಕರ್ನಾಟಕದಲ್ಲಿ ಕೈಗೊಂಡಿರುವ ನೆರವಿನ ಕಾರ್ಯಕ್ಕಾಗಿ ಒಂದು ಲಕ್ಷ ರುಪಾಯಿ ಕಳಿಸಿದ್ದಾರೆ.
‘ಶಾಸ್ತ್ರಿ ಚಿತ್ರದ ನಾಯಕ ನಟಿ ಮಾನ್ಯ ಈಗ ಅಮೆರಿಕದಲ್ಲಿ ನೆಲೆಸಿದ್ದು ಇಲ್ಲಿನ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲು ಒಂದು ಲಕ್ಷ ರೂಪಾಯಿ ಕಳುಹಿಸಿದ್ದಾರೆ. ಈ ಹಣದಿಂದ ದಿನಸಿ ಕಿಟ್ ಸದ್ಯದಲ್ಲೇ ವಿತರಿಸಿ ಅದರ ವಿವರ ತಿಳಿಸುತ್ತೇವೆ’ ಎಂದು ಉಪೇಂದ್ರ ಟ್ವೀಟ್ ಮಾಡಿದ್ದಾರೆ.
ಶಾಸ್ತ್ರಿ ಚಿತ್ರದ ನಾಯಕ ನಟಿ ಮಾನ್ಯ ಈಗ ಅಮೆರಿಕದಲ್ಲಿ ನೆಲೆಸಿದ್ದು ಇಲ್ಲಿನ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲು ಒಂದು ಲಕ್ಷ ರುಪಾಯಿ ಕಳಿಸಿದ್ದಾರೆ 🙏 ಈ ಹಣದಿಂದ ದಿನಸಿ ಕಿಟ್ ಸದ್ಯದಲ್ಲೇ ವಿತರಿಸಿ ಅದರ ವಿವರ ತಿಳಿಸುತ್ತೇವೆ. pic.twitter.com/V2AxOcnK7X
— Upendra (@nimmaupendra) May 11, 2021