ಲಂಡನ್: ಪ್ರಧಾನಿಯಾದರೇನು? ಸಾಮಾನ್ಯ ವ್ಯಕ್ತಿಯಾದರೇನು? ಕಾನೂನಿನ ಮುಂದೆ ಎಲ್ಲರೂ ತಲೆ ಬಾಗಲೇಬೇಕು. ಬ್ರಿಟಿಷ್ ಪೊಲೀಸರು ಪ್ರಧಾನಿ ವಿರುದ್ದವೇ ಕಾನೂನು ಪ್ರಹಾರ ಮಾಡಿರುವ ಅಚ್ಚರಿಯ ಬೆಳವಣಿಗೆಗೆ ಲಂಡನ್ ಸಾಕ್ಷಿಯಾಗಿದೆ. ಸೀಟ್ ಬೆಲ್ಟ್ ಧರಿಸದೆ ಕಾರಿನಲ್ಲಿ ಸವಾರಿ ಮಾಡಿದ್ದಕ್ಕಾಗಿ ಬ್ರಿಟಿಷ್ ಪ್ರಧಾನಿ ದಂಡ ಕಟ್ಟುವ ಪರಿಸ್ಥಿತಿ ಎದುರಾಗಿರುವ ವಿಷಯ ವಿಶ್ವಾದ್ಯಂತ ಸುದ್ದಿಯಾಗಿದೆ.
ರಿಷಿ ಸುನಕ್ ಅವರು ಉತ್ತರ ಇಂಗ್ಲೆಂಡ್ನ ಲಂಕಾಶೈರ್ನಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಸೀಟ್ ಬೆಲ್ಟ್ ಧರಿಸಿರಲಿಲ್ಲ. ಕಾರಿನ ಹಿಂದಿನ ಸೀಟಿನಲ್ಲಿದ್ದವರು ಈ ಬಗ್ಗೆ ವೀಡಿಯೊ ಚಿತ್ರೀಕರಿಸಿದ್ದರು ಅದೇ ವೀಡಿಯೋ ದಂಡ ಕಟ್ಟುವ ಪರಿಸ್ಥಿತಿ ತಂದೊಡ್ಡಬಹುದೆಂಬ ಅರಿವು ಪ್ರಧಾನಿ ರಿಷಿ ಸುನಕ್ ಅವರಿಗೂ ಇರಲಿಲ್ಲ. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾದಾಗ ಅಧಿಕಾರಿಗಳೂ ಗಲಿಬಿಲಿಗೊಂಡರು.
Apologies for not wearing a seatbelt, but I thought that rule only applied to other people and not to us. You know, like all the other rules.#LevellingUpFundpic.twitter.com/ZzFmiHcgFL
— Parody Rishi Sunak (@Parody_PM) January 19, 2023
ಈ ನಡುವೆ, ಆಕ್ಷೇಪದ ಮಾತುಗಳು ಕೇಳಿ ಬರುತ್ತಿದ್ದಂತೆಯೇ ಪ್ರಧಾನಿ ಸುನಕ್ ಅವರು ತಮ್ಮ ನಡೆ ಬಗ್ಗೆ ಕ್ಷಮೆಯಾಚಿಸಿದರು. ಆದರೂ ಕಾನೂನು ಬಿಡಬೇಕಲ್ಲವೇ? ಸಾಮಾಜಿಕ ಜಾಲತಾಣಗಳಲ್ಲಿನ ವೀಡಿಯೋ ಆಧರಿಸಿ ಲಂಕಾಶೈರ್ ಪೊಲೀಸರು ದಂಡ ವಿಧಿಸಿದ್ದಾರೆ. ಜೊತೆಗೆ ಈ ವಿಷಯವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. .