(ವರದಿ: ಸುರೇಶ್ ಬಾಬು, ದೊಡ್ಡಬಳ್ಳಾಪುರ)
ಬೆಂಗಳೂರು: ಪೂರ್ಣ ಪ್ರಮಾಣದದಲ್ಲಿ ಎಲ್ಲಾ ತರಗತಿಗಳ ಆರಂಭಕ್ಕೆ ಆಗ್ರಹಿಸಿ ಈ ತಿಂಗಳ 23ರಂದು ರಾಜ್ಯವ್ಯಾಪಿ ಖಾಸಗಿ ಶಾಲೆಗಳನ್ನು ಬಂದ್ ಮಾಡು ಖಾಸಗಿ ಶಾಲೆಗಳ ಒಕ್ಕೂಟ ಕರೆ ನೀಡಿದೆ.
ಕರೊನಾ ಹಾಗೂ ಲಾಕ್ ಡೌನ್ ನಿಂದಾಗಿ ಖಾಸಗಿ ಶಾಲೆಗಳ ಶಿಕ್ಷಕರು, ಭೋದಕೇತರ ಸಿಬ್ಬಂದಿ ತೀವ್ರ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಮಾರುಕಟ್ಟೆ, ಸಿನಿಮಾ ಮಂದಿರಗಳಿಗೆ ಪೂರ್ಣ ಪ್ರಮಾಣದಲ್ಲಿ ಅನುಮತಿ ನೀಡಿದೆ. ಆದರೆ ಶಾಲೆಗಳ ಆರಂಭಕ್ಕೆ ಮಾತ್ರ ಮೀನಾಮೀಷ ಎದುರಿಸುತ್ತಿದೆ ಎಂದು ಒಕ್ಕೂಟದ ಮುಖಂಡರು ಆರೋಪಿಸಿದ್ದಾರೆ.
ದೊಡ್ಡಬಳ್ಳಾಪುರದ ಪದ್ಮಾವಿದ್ಯಾನಿಕೇತನ ಶಾಲೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಖಾಸಗಿ ಶಾಲೆಗಳ ಒಕ್ಕೂಟದ ತಾಲೂಕು ಘಟಕದ ಅಧ್ಯಕ್ಷ ಎ. ಸುಬ್ರಹ್ಮಣ್ಯ ಹಾಗೂ ಪದಾಧಿಕಾರಿಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 1ರಿಂದ 5ನೇ ತರಗತಿಗಳಿಗೆ ಪೂರ್ಣ ಪ್ರಮಾಣದಲ್ಲಿ ಶಾಲೆ ನಡೆಸಲು ಅನುಮತಿ ನೀಡಬೇಕು ಎಂದು ಆಗ್ರಹಿಸಿದರು,
ಇದೀಗ ಖಾಸಗಿ ಶಾಲೆಗಳನ್ನು ನಡೆಸುವುದು ಕಷ್ಟಕರ ವಾಗಿದೆ. ನಮ್ಮ ತಾಲ್ಲೂಕಿನನಲ್ಲಿ ನೀಡುವಷ್ಟು ಉತ್ತಮ ಶಿಕ್ಷಣ ಎಲ್ಲೂ ನೀಡಲ್ಲ. ನಮ್ಮ ತಾಲ್ಲೂಕಿನಲ್ಲಿ ಕಡಿಮೆ ಫೀ ಇದೆ. ಶಿಕ್ಷಣ ಸಚಿವರು ಆಡಳಿತ ಮಂಡಳಿಗಳ ವಿರುದ್ಧ ಪೋಷಕರನ್ನು ಎತ್ತಿಕಟ್ಟಿದ್ದಾರೆ. ಸರ್ಕಾರ ಗೊಂದಲ ಮಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಶೈಕ್ಷಣಿಕ ಪ್ರಗತಿ ಇಲ್ಲದೆ ಮಕ್ಕಳ ಕಲಿಕೆ 80℅ರಷ್ಟು ಕಡಿಮೆಯಾಗಿದೆ. ಶಾಲೆಗಳನ್ನು ಆರಂಭ ಮಾಡುವಂತೆ ಪೋಷಕರು ಆಗ್ರಹ ಮಾಡುತ್ತಿದ್ದಾರೆ. ಮಕ್ಕಳ ಆಯೋಗದ ವರದಿಯಂತೆ ಪೂರ್ಣ ಪ್ರಮಾಣದಲ್ಲಿ ಶಾಲೆಗಳ ಆರಂಭ ಮಾಡಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು.
ಶಾಲೆಗಳು ಇಲ್ಲದೆ ಮಕ್ಕಳು ಕೂಡ ಕೆಲಸದತ್ತ ಮುಖ ಮಾಡಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಟ್ಯೂಷನ್‌ಗಳ ಹೆಸರಲ್ಲಿ ವಸೂಲಿ ದಂಧೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ವಿವಿಧ ಬೇಡಿಕೆಗಳ ಒತ್ತಾಯಿಸಿ ಫೆ.23ರಂದು ಕ್ಯಾಮ್ಸ್ ವತಿಯಿಂದ ಪ್ರತಿಭಟನೆ ಹಮ್ಮಿಕೊಂಡಿದ್ದು, ಅಂದು ಬೆಂಗಳೂರಿನಲ್ಲಿ ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ಮೆರವಣಿಗೆ ಮಾಡಿ ಪ್ರತಿಭಟಿಸಲಾಗುವುದು ಎಂದು ಪ್ರಧಾನ ಕಾರ್ಯದರ್ಶಿ ರಮೇಶ್ ಹೇಳಿದರು.