ಸೇವ್ ಲೈಫ್ ಟ್ರಸ್ಟ್’ ವತಿಯಿಂದ ಆರು ಓಕ್ಸಿಜೆನ್ ಕಾನ್ಸನ್ಟ್ರೇಟರ್ಸ್.. ಮಂಗಳೂರಿನ ವೆನಲಾಕ್ ಆಸ್ಪತ್ರೆಗೆ ಕೊಡುಗೆ..
ಮಂಗಳೂರು : ಬಂದರು ನಗರ ಮಂಗಳೂರಿನ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ 6 ಓಕ್ಸಿಜೆನ್ ಕಾನ್ಸನ್ಟ್ರೇಟರ್ಸ್’ಗಳನ್ನು ಜಿಲ್ಲಾ ವೆನಲಾಕ್ ಆಸ್ಪತ್ರೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಮುಖಾಂತರ ಇಂದು ಹಸ್ತಾಂತರಿಸಲಾಯಿತು.
ಕಳೆದ ಹಲವಾರು ವರ್ಷಗಳಿಂದ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್, ಕರಾವಳಿ ಜಿಲ್ಲೆಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಹಾಗೂ ವೈದ್ಯಕೀಯ ಸೌಲಭ್ಯದಿಂದ ವಂಚಿತರಾದ ಜನರಿಗೆ ದನ ಸಹಾಯ ನೀಡುತ್ತಾ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ಕಳೆದ 10 ತಿಂಗಳಿನಲ್ಲಿ 200 ಕ್ಕೂ ಕಾರಣಗಳಿಗೆ 1.1 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ನೆರವಿನ ಕೆಲಸ ಮಾಡಿದೆ. ಸಮಾಜದ ಏಳಿಗೆಗಾಗಿ ಈ ಟ್ರಸ್ಟ್ ಶ್ರಮಿಸುತ್ತಿದೆ . ಈ ಬಾರಿ ಮಂಗಳೂರು, ಬಂಟ್ವಾಳ, ಉಡುಪಿಯ 700 ಕುಟುಂಂಬಗಳಗೆ ಅಗತ್ಯ ವಸ್ತುಗಳ ಕಿಟ್’ಗಳನ್ನು ವಿತರಿಸಿರುವ ಈ ಟ್ರಸ್ಟ್ ಸ್ವಯಂಸೇವಕರು ಮಾನವೀಯತೆ ಮೆರೆದಿದ್ದಾರೆ.
ಪ್ರಸ್ತುತ ಮಹಾಮಾರಿಯ ಎರಡನೇ ಅಲೆಯು ವಿಪರೀತವಾಗಿ ಹರಡುತ್ತಿದ್ದು,ರಾಜ್ಯಾ ದ್ಯಂತ ಕೈ ಮೀರಿ ಹೋಗಿರುತ್ತದೆ. ಈ ಪರಿಸ್ಥಿತಿಯನ್ನು ಮನಗಂಡು ‘ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್’ ವತಿಯಿಂದ 6 ಓಕ್ಸಿಜೆನ್ ಕಾನ್ಸನ್ಟ್ರೇಟರ್ಸ್ ಗಳನ್ನು ಜಿಲ್ಲಾ ವೆನಲಾಕ್ ಆಸ್ಪತ್ರೆಗೆ ನೀಡಲಾಗಿದೆ .
ಈ ಓಕ್ಸಿಜೆನ್ ಕಾನ್ಸನ್ಟ್ರೇಟರ್ಸ್ ಗಳನ್ನು ಸ್ವೀಕರಿಸಿದ ಬಳಿಕ ಜಿಲ್ಲಾಧಿಕಾರಿಗಳು ಮಾತನಾಡಿ ನೀವು ತಮ್ಮ ಸಂಸ್ಥೆಯ ವತಿಯಿಂದ ಸಾರ್ವಜಿಕರಿಗೆ ಉಪಯೋಗವಾಗುವಂತಹ ಸೇವಾ ಕಾರ್ಯ ಮೆಚ್ಚು ವಂಥದದ್ದು , ನೀವು ನೀಡಿದ ರೀತಿಯಂತೆ ಇನ್ನು ಸಾರ್ವಜನಿಕ ಸೇವಾ ಸಂಸ್ಥೆಗಳು ಮುಂದೆ ಬರುವಂತೆ ಆಗಲಿ ಎಂದು ಶುಭ ಹರಿಸಿದರು ,
‘ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್’ ಕೊಟುಗೆಯಾಗಿ ಸಮರ್ಪಿಸಿರುವ ಈ 6 ಓಕ್ಸಿಜೆನ್ ಕಾನ್ಸನ್ಟ್ರೇಟರ್ಸ್’ಗಳನ್ನು ಜಿಲ್ಲಾಧಿಕಾರಿಗಳು ಟ್ರಸ್ಟ್ ನ ಅಧ್ಯಕ್ಷ ಅರ್ಜುನ್ ಭಂಡಾರ್ಕಾರ್ , ಛಾಯಾಗ್ರಾಹಕ ಮಂಜು ನೀರೇಶ್ವಾಲ್ಯ, ರಮೇಶ್ ಶೆಣೈ ಉಪಸ್ಥಿತಿಯಲ್ಲಿ ಡಿಎಂಓ ಅವರಿಗೆ ಹಸ್ತಾಂತರಿಸಿದರು.