ಮೊಬೈಲ್ ಫೋನ್ಗಳಲ್ಲಿನ ಸಿಮ್ ಆಫ್ ಆದರೆ, ನೆಟ್ವರ್ಕ್ ಕಡಿತವಾದರೆ ಸ್ಯಾಟ್ಲೈಟ್ ಫೋನ್ ಆಗಿ ಪರಿವರ್ತನೆಯಾಗುವ ಸೆಲ್ ಫೋನ್ ಸದ್ಯವೇ ಬರಲಿದೆ. ಈ ಸಂಬಂಧ ಆ್ಯಪಲ್ ಸಂಸ್ಥೆ ಮಹತ್ವದ ಸಂಶೋಧನೆಯಲ್ಲಿ ತೊಡಗಿದೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ಮೊಬೈಲ್ ನಮ್ಮ ಜೊತೆಗಿರಲೇಬೇಕು. ಹೀಗಿರುವಾಗ ನಿರ್ಜನ ಪ್ರದೇಶ, ಅಥವಾ ಗುಡ್ಡಗಾಡು ಪ್ರದೇಶಗಳಿಗೆ ತೆರಳಿದಾಗ ಆ ಪ್ರದೇಶ ನೆಟ್ವರ್ಕ್ ಪ್ರದೇಶದಿಂದ ಹೊರಗಿರಬಹುದು. ಅಂತಹಾ ಪರಿಸ್ಥಿತಿಯಲ್ಲಿ ಪೊಲೀಸ್ ಅಥವಾ ಪರಿಚಿತರೊಂದಿಗೆ ಮಾತನಾಡಲು ಅವಕಾಶವಿರುವ ರೀತಿ ಆ್ಯಪಲ್ ಸಂಸ್ಥೆ ಸುಧಾರಿತ ಮೊಬೈಲ್ ಫೋನ್ಗಳನ್ನು ಸಿದ್ದಪಡಿಸುತ್ತಿದೆಯಂತೆ.
ಸಿಮ್ ನೆಟ್ವರ್ಕ್ ಸಂಪರ್ಕ ಕಳೆದುಕೊಂಡಾಗ ಸ್ಯಾಟ್ಲೈಟ್ ಸಂಪರ್ಕ ಸಾಧಿಸುವಂತಹಾ ರೀತಿ ಉಪಗ್ರಹ ಆಧಾರಿತ ವ್ಯವಸ್ಥೆಯ ಸಾಧನ ಅಳವಡಿಸುವ ಕಾರ್ಯ ನಡೆದಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ.