ಬೆಂಗಳೂರು: ಹಗರಣಗಳ ಆರೋಪದ ಸುಳಿಯಲ್ಲಿ ಸಿಲುಕಿರುವ ಸಿಎಂ ಬೊಮ್ಮಾಯಿ ಸರ್ಕಾರವು 40℅ ಕಮೀಷನ್ ಆರೋಪದ ಬಗ್ಗೆ ಪ್ರತಿಪಕ್ಷಗಳಿಂದ ಹಾಗೂ ಸಾರ್ವಜನಿಕರಿಂದ ಛೀಮಾರಿ ಹಾಕಿಸಿಕೊಳ್ಳುತ್ತಲೇ ಇದೆ. ಇದೀಗ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕಚೇರಿ ಸಹಿತ ಅಧಿಕಾರಿಗಳಿಗೆ ಸಾರ್ವಜನಿಕರು ಬರೆಯುವ ಪತ್ರಗಳಿಗೆ ಬೆಲೆಯೇ ಇಲ್ಲ ಎಂಬ ಆಕ್ರೋಶವೂ ಪ್ರತಿಧ್ವನಿಸುತ್ತಿದೆ.
ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರು ಅಹವಾಲು ಸಲ್ಲಿಸಿದರೆ ಅದಕ್ಕೆ ಹಿಂಬರಹ ನೀಡುವುದು ಬಹುಕಾಲದಿಂದಲೂ ನಡೆದುಬಂದಿರುವ ಸಂಪ್ರದಾಯ. ಆದರೆ ಇದೀಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಸರ್ಕಾರಕ್ಕೆ ಸಲ್ಲಿಕೆಯಾಗುತ್ತಿರುವ ಸಾರ್ವಜನಿಕರ ದೂರುಗಳು ಹಾಗೂ ಅಹವಾಲುಗಳ ಬಗ್ಗೆ ಪ್ರತಿಕ್ರಿಯೆ ನೀಡುತ್ತಿಲ್ಲ ಎಂಬ ಆರೋಪ ಕೇಳಿಬರತ್ತಿದೆ. ಯಾವಾಗ 40% ಕಮೀಷನ್ ಆರೋಪ ಕೇಳಿಬಂತೋ ಅದಾಗಿನಿಂದ ಮುಖ್ಯ ಕಾರ್ಯದರ್ಶಿ ಕಚೇರಿ ಸಹಿತ ಸರ್ಕಾರದ ವಿವಿಧ ಇಲಾಖೆಗಳಿಗೆ ಬಹಳಷ್ಟು ಅಹವಾಲುಗಳು ಸಲ್ಲಿಕೆಯಾಗಿವೆ. ಆದರೆ ಇದಕ್ಕೆ ಅಧಿಕಾರಿಗಳು ಹಿಂಬರಹ ನೀಡುವ ಸೌಜನ್ಯವನ್ನೂ ತೋರಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಸಾಮಾಜಿಕ ಹೋರಾಟಗಾರರು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಅಧಿಕಾರಿಗಳ ನಡೆ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಇದೇ ರೀತಿ, ಕಮೀಷನ್ ಆರೋಪ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಪತ್ನಿ ಕೂಡಾ ಸರ್ಕಾರದ ನಡೆ ಬಗ್ಗೆ ಕೆಂಡಾಮಂಡಲರಾಗಿದ್ದಾರೆ. ರಾಜ್ಯ ಸರ್ಕಾರದ ವಿರುದ್ದ ಅವರು ರಾಜ್ಯಪಾಲರಿಗೆ ದೂರು ನೀಡಿದ್ದಾರೆಂಬ ಬೆಳವಣಿಗೆ ಬಿಜೆಪಿ ಪಾಳಯದಲ್ಲಿ ಸಂಚಲನ ಸೃಷ್ಟಿಸಿದೆ.
ಈ ಬೆಳವಣಿಗೆ ಬಗ್ಗೆ ಖಾರವಾಗಿ ಪ್ರಶ್ನಿಸಿರುವ ಪ್ರತಿಪಕ್ಷ ಕಾಂಗ್ರೆಸ್, ‘ಸಂತೋಷ್ ಪಾಟೀಲ್ ಪತ್ರ ಬರೆದು ಬರೆದೂ ಬೇಸತ್ತು ಜೀವ ಬಿಟ್ಟರು, ಈಗ ಅವರ ಪತ್ನಿ ನ್ಯಾಯಕ್ಕಾಗಿ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ’ ಎಂದು ಪರಿಸ್ಥಿತಿ ಬಗ್ಗೆ ಲೇವಡಿ ಮಾಡಿದೆ.
‘40% ಸರ್ಕಾರದಲ್ಲಿ ಆಡಳಿತದಲ್ಲಿ ಸಾಮಾನ್ಯರ ಪತ್ರಗಳಿಗೆ, ನ್ಯಾಯದ ಕೋರಿಕೆಗಳಿಗೆ ಬೆಲೆ ಇದೆಯೇ? ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮುಂದೆ ಪ್ರಶ್ನೆಗಳನ್ನು ಇಟ್ಟಿರುವ ಕಾಂಗ್ರೆಸ್, ‘ಈಶ್ವರಪ್ಪನವರ ತನಿಖೆ ಏಕಿಲ್ಲ? A1 ಆರೋಪಿಯಾದರೂ ಬಂಧಿಸಲಿಲ್ಲವೇಕೆ? ಎಂದು ಟ್ವೀಟ್ ಮಾಡಿದೆ.
ಸಂತೋಷ್ ಪಾಟೀಲ್ ಪತ್ರ ಬರೆದು ಬರೆದೂ ಬೇಸತ್ತು ಜೀವ ಬಿಟ್ಟರು, ಈಗ ಅವರ ಪತ್ನಿ ನ್ಯಾಯಕ್ಕಾಗಿ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.
40% ಸರ್ಕಾರದಲ್ಲಿ ಆಡಳಿತದಲ್ಲಿ ಸಾಮಾನ್ಯರ ಪತ್ರಗಳಿಗೆ, ನ್ಯಾಯದ ಕೋರಿಕೆಗಳಿಗೆ ಬೆಲೆ ಇದೆಯೇ @BSBommai ಅವರೇ.
ಈಶ್ವರಪ್ಪನವರ ತನಿಖೆ ಏಕಿಲ್ಲ?
A1 ಆರೋಪಿಯಾದರೂ ಬಂಧಿಸಲಿಲ್ಲವೇಕೆ?#BJPCorruptionFiles— Karnataka Congress (@INCKarnataka) July 16, 2022
‘ಮುಖ್ಯಮಂತ್ರಿಯವರೇ,
ಸಂತೋಷ್ ಪಾಟೀಲ್‌ರ ಪತ್ನಿ ರಾಜ್ಯಪಾಲರಿಗೆ ನ್ಯಾಯಕ್ಕಾಗಿ ಪತ್ರ ಬರೆಯುವ ಪ್ರಮೇಯ ಬಂದಿದ್ದೇಕೆ? ನಿಮ್ಮ ಮೇಲೆ ವಿಶ್ವಾಸ ಇಲ್ಲದಿರುವುದು ಹಾಗೂ ನಿಮ್ಮ ಸರ್ಕಾರದ ತನಿಖೆಯ ಮೇಲೆ ನಂಬಿಕೆ ಕಳೆದುಹೋಗಿರುವುದು ನಿಮಗಂಟಿದ ಕಳಂಕ ಅಲ್ಲವೇ? ಆರೋಪಿ ಈಶ್ವರಪ್ಪನವರ ರಕ್ಷಣೆಗೆ ಬೇಲಿ ಕಟ್ಟಿ ನಿಂತಿದ್ದಿರಲ್ಲವೇ ಎಂದು ಕೈ ಪಕ್ಷ ಪ್ರಶ್ನೆ ಮಾಡಿದೆ.
'@BSBommai ಅವರೇ,
ಸಂತೋಷ್ ಪಾಟೀಲ್‌ರ ಪತ್ನಿ ರಾಜ್ಯಪಾಲರಿಗೆ ನ್ಯಾಯಕ್ಕಾಗಿ ಪತ್ರ ಬರೆಯುವ ಪ್ರಮೇಯ ಬಂದಿದ್ದೇಕೆ?ನಿಮ್ಮ ಮೇಲೆ ವಿಶ್ವಾಸ ಇಲ್ಲದಿರುವುದು ಹಾಗೂ ನಿಮ್ಮ ಸರ್ಕಾರದ ತನಿಖೆಯ ಮೇಲೆ ನಂಬಿಕೆ ಕಳೆದುಹೋಗಿರುವುದು ನಿಮಗಂಟಿದ ಕಳಂಕ ಅಲ್ಲವೇ?
ಆರೋಪಿ ಈಶ್ವರಪ್ಪನವರ ರಕ್ಷಣೆಗೆ ಬೇಲಿ ಕಟ್ಟಿ ನಿಂತಿದ್ದಿರಲ್ಲವೇ.#BJPcorruptionFiles
— Karnataka Congress (@INCKarnataka) July 16, 2022
ಪತ್ರಿಕೆಗಳು ಬರೆಯಬಾರದು, ಪತ್ರಕರ್ತರು ಪ್ರಶ್ನೆ ಕೇಳಬಾರದು, ಜನತೆ ಪ್ರತಿಭಟಿಸಬಾರದು, ಮುಕ್ತವಾಗಿ ತಿನ್ನಬಾರದು, ಸಂಸತ್ತಿನಲ್ಲಿ ಮಾತಾಡಬಾರದು, ಕಚೇರಿಗಳಲ್ಲಿ ಚಿತ್ರಿಕರಿಸಬಾರದು, ಹಾಸ್ಯ ಮಾಡಬಾರದು, ವ್ಯಂಗ್ಯ ಚಿತ್ರ ಬಿಡಿಸಬಾರದು ಎಂದು ಸರ್ಕಾರದ ನಡೆ ಬಗ್ಗೆ ಟೀಕಿಸಿರುವ ಕಾಂಗ್ರೆಸ್, ಇದೆಲ್ಲವೂ ತಾಲಿಬಾನ್‌ನಿಂದ ಕೇಳಿಬರುತ್ತಿತ್ತು, ಈಗ ನಮ್ಮಲ್ಲೇ ಕಣ್ಣೆದುರು ಜರುಗುತ್ತಿದೆ ಎಂದು ಬಿಜೆಪಿ ಸರ್ಕಾರದ ಜನ ವಿರೋಧಿ ನಡೆ ಬಗ್ಗೆ ಕುಟುಕಿದೆ.
>ಪತ್ರಿಕೆಗಳು ಬರೆಯಬಾರದು
>ಪತ್ರಕರ್ತರು ಪ್ರಶ್ನೆ ಕೇಳಬಾರದು
>ಜನತೆ ಪ್ರತಿಭಟಿಸಬಾರದು
>ಮುಕ್ತವಾಗಿ ತಿನ್ನಬಾರದು
>ಸಂಸತ್ತಿನಲ್ಲಿ ಮಾತಾಡಬಾರದು
>ಕಚೇರಿಗಳಲ್ಲಿ ಚಿತ್ರಿಕರಿಸಬಾರದು
>ಹಾಸ್ಯ ಮಾಡಬಾರದು
>ವ್ಯಂಗ್ಯ ಚಿತ್ರ ಬಿಡಿಸಬಾರದುಇದೆಲ್ಲವೂ ತಾಲಿಬಾನ್‌ನಿಂದ ಕೇಳಿಬರುತ್ತಿತ್ತು, ಈಗ ನಮ್ಮಲ್ಲೇ ಕಣ್ಣೆದುರು ಜರುಗುತ್ತಿದೆ.
— Karnataka Congress (@INCKarnataka) July 16, 2022





















































