ಮಂಗಳೂರು: ಕಡಲತಡಿಯ ನಗರಿ ಮಂಗಳೂರಿನ ಸಂಘನಿಕೇತನದಲ್ಲಿ ಅಮೃತ ಮಹೋತ್ಸವ ಸಂಭ್ರಮಾಚರಣೆಯ ಸಾರ್ವಜನಿಕ ಶ್ರೀ ಗಣೇಶೋತ್ಸವ ವಿವಿಧತೆಯಿಂದ ನಾಡಿನ ಗಮನಸೆಳೆದಿದೆ. ಧರ್ಮ-ಸಂಸ್ಕೃತಿಯ ಶಕ್ತಿಕೇಂದ್ರವಾಗಿರುವ ಸಂಘನಿಕೇತನದಲ್ಲಿ ವಿಘ್ನ ನಿವಾರಕನ ಕೈಂಕರ್ಯದ ಜೊತೆ, ಸಾಂಸ್ಕೃತಿಕ ಮಹಾವೈಭವ ಕೂಡಾ ಮೇಳೈಸಿದೆ.
ಸಾಂಸ್ಕ್ರತಿಕ ಕಾರ್ಯಕ್ರಮಗಳು ಈ ಮಹೋತ್ಸವಕ್ಕೆ ಆಕರ್ಷಣೆ ತುಂಬಿದೆ. ಭವ್ಯ ವೇದಿಕೆಯಲ್ಲಿ ಆಳ್ವಾಸ್ ಸಾಂಸ್ಕ್ರತಿಕ ವೈಭವ ಕಾರ್ಯಕ್ರಮ ಗಮನಕೇಂದ್ರೀಕರಿಸಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಿ ನಡೆಸಿಕೊಟ್ಟ ಈ ನೃತ್ಯ ಕಾರ್ಯಕ್ರಮ ಗಣೇಶ ಭಕ್ತರ ಮೆಚ್ಚುಗೆಗೆ ಪಾಯ್ರವಾಯಿತು.
ಈ ಕಾರ್ಯಕ್ರಮಗಳಲ್ಲಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಸತೀಶ್ ಪ್ರಭು, ಸುರೇಶ ಕಾಮತ್ , ಉಪಾಧ್ಯಕ್ಷರಾದ ಜೆ.ಕೆ ರಾವ್, ಆನಂದ ಪಾಂಗಳ, ಕೆ.ಪಿ.ಟೈಲಾರ್, ಅಭಿಷೇಕ್ ಭಂಡಾರಿ, ಜೀವನರಾಜ್ ಶೆಣೈ ಕೇಶವ ಸ್ಮ್ರತಿ ಸಂವರ್ಧನ ಸಮಿತಿಯ ವಿನೋದ್ ಶೆಣೈ, ರಘುವೀರ್ ಕಾಮತ್, ಎಸ್.ಆರ್.ಕುಡ್ವ , ಗಣೇಶ್ ಪ್ರಸಾದ್, ಜಯಪ್ರಕಾಶ್ ಮಂಗಳಾದೇವಿ ಸ್ವಾಮಿಪ್ರಸಾದ್ ಸಹಿತ ಗಣ್ಯಾತಿಗಣ್ಯರು ಉಪಸ್ಥಿತರಿದ್ದರು