ಉಕ್ರೇನ್ ಮೇಲಿನ ರಷ್ಯಾ ಸೇನಾ ದಾಳಿಯು ಭಾರೀ ಸಾವು-ನೋವಿಗೆ ಕಾರಣವಾಗಿದೆ. ನಿರಂತರ ಸ್ಫೋಟ ಹಾಗೂ ಬಾಂಬ್ ದಾಳಿಯಿಂದ ನಲುಗಿರುವ ಸಮರ ಸಂತ್ರಸ್ತ ಉಕ್ರೇನ್ ಜನರು ನಿರಾಶ್ರಿತರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಆದರೂ ಅವಿರತ ಬಾಂಬ್ ದಾಳಿಯಿಂದಾಗಿ ಈ ನಿರಾಶ್ರಿತರೂ ಜೀವ ಭಯದಿಂದ ಕಂಗಾಲಾಗಿದ್ದಾರೆ. ದೇವರ ಮೊರೆಹೋಗಿದ್ದಾರೆ.
ಈ ನಡುವೆ, ಉಕ್ರೇನ್‌ನಲ್ಲಿರುವ ನಿರಾಶ್ರಿತರ ಕೇಂದ್ರದಲ್ಲಿ ಜಮಾಯಿಸಿರುವ ಜನರಲ್ಲಿನ ಆತಂಕ ದೂರಮಾಡುವ ಸಲುವಾಗಿ ಯುವಜನರು ಪ್ರಾರ್ಥನೆ, ಹಾಡುಗಳ ಮೂಲಕ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ.
Sheltered Ukrainians sing hopeful songs as war rages on. #Ukraine pic.twitter.com/CrLezIAdUw
— Ukraine live (@berojag59060636) February 25, 2022
ಇನ್ನೊಂದೆಡೆ, ನೋವಿನಂಗಳದಲ್ಲಿ ಸೈನಿಕರೂ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ. ಜೀವಭಯದಲ್ಲಿರುವ ಜನರಲ್ಲಿ ಯೋಧರು ಆತ್ಮವಿಶ್ವಾಸ ತುಂಬುವ ಪ್ರಯತ್ನ ನಿರತರಾಗಿದ್ದಾರೆ. ಯೋಧರ ಈ ಮಾನವೀಯತೆಯ ವೀಡಿಯೋ ವೈರಲ್ ಆಗಿದೆ.
Emotional video #Ukraine soldiers.#Russia #Ukraine #Kiev #Kyiv #subwaystation #RussiaInvadedUkraine #russianinvasion #Ukraine #UkraineRussiaConflict #Putin pic.twitter.com/CH7hqkZxzk
— SUSHIL PANDEY (@sushilemedia) February 25, 2022