ಭೋಪಾಲ್: ಅಖಂಡ ಭಾರತವಾಗದೇ ಇದ್ದರೆ ನಮ್ಮ ರಾಷ್ಟ್ರ ಅಪೂರ್ಣ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತೊಮ್ಮೆ ಪ್ರತಿಪಾದಿಸಿದೆ. ವಿಭಜನೆಯ ಪರಿಕಲ್ಪನೆಯನ್ನು ನಾವು ಒಪ್ಪಿಲ್ಲ. ಅಖಂಡತೆಯಲ್ಲೇ ವಿಶ್ವಾಸವಿರುವುದು ಎಂಬ ನಿಲುವನ್ನು ಸಂಘ ಸಮರ್ಥಿಸಿಕೊಂಡಿದೆ.
ಈ ವಿಚಾರ ಕುರಿತಂತೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಆರೆಸ್ಸೆಸ್ ಸರಸಂಘಚಾಲಕ್ ಪ.ಪೂ. ಮೋಹನ್ ಭಾಗವತ್ ಮಾಡಿದ ಭಾಷಣ ಸಂಚಲನ ಸೃಷ್ಟಿಸಿದೆ. ಸಮಾರಂಭದಲ್ಲಿ ಗಣ್ಯರನ್ನುದ್ದೇಶಿಸಿ ಮಾತನಾಡಿದ ಅವರು, ಹಿಂದೂಗಳು ಹಿಂದೂಗಳಾಗಿ ಉಳಿಯಲು ಭಾರತವನ್ನು ‘ಅಖಂಡ’ ರಾಷ್ಟ್ರವಾಗಲೇಬೇಕು ಎಂದರು.
हिंदू के बिना भारत नहीं और भारत के बिना हिंदू नहीं। जहाँ हिंदू भाव कम हुआ वो हिस्सा भारत से अलग हो गया। इसीलिए पाकिस्तान बना। आज के भारत में भी जहाँ-जहाँ गड़बड़ हैं, उसका कारण हिंदू भाव की कमी है। pic.twitter.com/4pxdLq05Pm
— Friends of RSS (@friendsofrss) November 28, 2021
‘ಹಿಂದೂಗಳಿಲ್ಲದೆ ಭಾರತವಿಲ್ಲ, ಭಾರತವಿಲ್ಲದೆ ಹಿಂದೂಗಳಿಲ್ಲ’ ಎಂಬ ಅವರ ಅಭಿಪ್ರಾಯ ಎಲ್ಲರ ಚಿತ್ತ ಸೆಳೆಯಿತು ಹಿಂದೂಸ್ತಾನ್ ಎಂದರೆ ‘ಹಿಂದೂ ರಾಷ್ಟ್ರ’, ಅದರ ಮೂಲವೇ ‘ಹಿಂದುತ್ವ’ ಎಂಬ ಸಮೀಕರಣವನ್ನು ಭಾಷಣದುದ್ದಕ್ಕೂ ಪ್ರತಿಪಾದಿಸುತ್ತಿದ್ದ ಸರಸಂಘಚಾಲಕ್, ‘ಹಿಂದೂಗಳು ಭಾರತದಿಂದ ಬೇರ್ಪಡಿಸಲಾಗದವರು ಮತ್ತು ಭಾರತವು ಹಿಂದೂಗಳಿಂದ ಬೇರ್ಪಡಿಸಲಾಗದು’ ಎಂಬ ಗಟ್ಟಿತನವನ್ನೂ ಉದಾಹರಿಸಿದರು.
ದೇಶದ ಇತಿಹಾಸವನ್ನು ಗಮನಿಸಿದಾಗ, ಯಾವಾಗ ಹಿಂದೂ ಅಸ್ಮಿತೆ ಮರೆತುಹೋಗುತ್ತೋ ಆಗ ದೇಶವು ಬಿಕ್ಕಟ್ಟನ್ನು ಎದುರಿಸುತ್ತಲೇ ಇತ್ತು. ಅದರ ಪರಿಣಾಮವೇ ರಾಷ್ಟ್ರ ಒಡೆದು ಹೋಯಿತು. ಅದನ್ನು ವಿರೋಧಿಸಿದ ಹಿಂದೂಗಳು ಪುನರುಜ್ಜೀವನ ಬಯಸಿದ್ದಾರೆ. ಅಂದರೆ ಅಖಂಡತೆಯ ಸಂಕಲ್ಪ ಮಾಡಿದ್ದಾರೆ ಎಂದವರು ಹೇಳಿದರು. ‘ಅಖಂಡ ಭಾರತ’ ಆಗುವ ಬಯಕೆಯನ್ನು ಇದೀಗ ದೇಶದ ಬಹುಪಾಲು ಮಂದಿ ಹೊಂದಿದ್ದಾರೆ ಎಂಬ ಸಂಗತಿಯತ್ತ ಅವರು ಬೆಳಕುಚೆಲ್ಲಿದರು.