ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕರಾಗಿದ್ದ ಬಾಬುರಾವ್ ದೇಸಾಯಿ ಅವರು ವಿಧಿವಶರಾಗಿದ್ದಾರೆ. ವಿಶ್ವ ಹಿಂದೂ ಪರಿಷತ್ ಸಹಿತ ಸಂಘದ ವಿವಿಧ ಕ್ಷೇತ್ರಗಳಲ್ಲಿ ಹಲವಾರು ರೀತಿ ಜವಾಬ್ದಾರಿ ಹೊಂದಿದ್ದ ಅವರು ಇತ್ತೀಚಿನ ವರ್ಷಗಳಲ್ಲಿ ವಿಶ್ರಾಂತಿಯಲ್ಲಿದ್ದರು. 97 ವರ್ಷ ಹರೆಯದ ದೇಸಾಯಿಯವರು ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಸ್ವಾತಂತ್ರ್ಯ ಪೂರ್ವದಿಂದಲೇ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಇವರು, ಕರ್ನಾಟಕ ದಕ್ಷಿಣ ಹಾಗೂ ಉತ್ತರ ಪ್ರಾಂತಗಳ ವಿವಿಧ ಜಿಲ್ಲಾ, ವಿಭಾಗ ಮಟ್ಟದ ಜವಾಬ್ಧಾರಿ ಹೊತ್ತು ಸಂಘದ ಸಂಘಟನೆ ಮಾಡಿದ್ದಾರೆ.
1986ರಲ್ಲಿ ವಿಶ್ವ ಹಿಂದೂ ಪರಿಷತ್‌ನ ಕಾರ್ಯದರ್ಶಿ ಆಗಿ ನೆಮಕವಾದ ಅವರು, ಅನಂತರ ಆ ಕ್ಷೇತ್ರದಲ್ಲೇ ಹೆಚ್ಚು ಸಕ್ರಿಯರಾದರು.
ಹಿರಿಯ ಮುಖಂಡರ ನಿಧನಕ್ಕೆ ಸಂಸದ ಪ್ರಹ್ಲಾದ ಜೋಶಿ, ಸಿಎಂ ಯಡಿಯೂರಪ್ಪ ಸೇರಿದಂತೆ ಬಿಜೆಪಿ ಹಾಗೂ ಸಂಘದ ಹಿರಿಯರನೇಕರು ಸಂತಾಪ ಸೂಚಿಸಿದ್ದಾರೆ.