ಪ್ರವಾಸೀ ತಾಣಗಳು ಒಂದಿಲ್ಲೊಂದು ಕಹಿ ಘಟನೆಗಳಿಗೆ ಸಾಕ್ಷಿಯಾಗುತ್ತಿರುತ್ತವೆ. ಇಲ್ಲೊಂದು ಪ್ರವಾಸಿ ತಾಣದಲ್ಲಿ ದೋಣಿ ವಿಹಾರ ನಿರತರನ್ನು ಬೃಹತ್ ಬಂಡೆಯೊಂದು ಬಲಿ ಪಡೆದಿದೆ.
ಈ ದುರ್ಘಟನೆ ನಡೆದಿರುವುದು ಬ್ರೆಜಿಲ್‌ನ ಸುಲ್‌ಮಿನಾಸ್‌ನಲ್ಲಿ. ಜನಪ್ರಿಯ ಪ್ರವಾಸಿ ತಾಣವಾದ ಕ್ಯಾಪಿಟೋಲಿಯೊ ಕಣಿವೆಯಲ್ಲಿರುವ ಜಲಪಾತ ಬಳಿ ಮೋಟಾರ್ ಬೋಟ್‌ಗಳ ಮೇಲೆ ಕಲ್ಲಿನ ಗೋಡೆ ಕುಸಿದು ಬಿದ್ದಿದೆ. ಶನಿವಾರ ಸಂಭವಿಸಿದ ಈ ಅವಘಡದಲ್ಲಿ ಕನಿಷ್ಟ 10 ಮಂದಿ ಸಾವನ್ನಪ್ಪಿದ್ದು, ಸುಮಾರು 30 ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಈ ದುರ್ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
URGENTE!!! Pedras se soltam de cânion em Capitólio, em Minas, e atingem três lanchas. pic.twitter.com/784wN6HbFy
— O Tempo (@otempo) January 8, 2022