ಕೊರೋನಾ ಕಾರಣದಿಂದಾಗಿ ಬಡವಾಗಿದ್ದ ಸಿನಿಮಾ ರಂಗಕ್ಕೆ ‘ರಾಬರ್ಟ್’ ಚಿತ್ರ ಚೇತರಿಕೆಯ ಹುರುಪು ತಂದಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಹೊಸ ದಾಖಲೆಯತ್ತ ಮುನ್ನುಗ್ಗುತ್ತಿದೆ. ಆದರೆ ಪೈರೆಸಿ ಕಾಟ ನಿರ್ಮಾಪಕರನ್ನು ಕಂಗಾಲಾಗಿಸಿದೆ.
ಕೋಟ್ಯಾಂತರ ರೂಪಾಯಿ ಬಂಡವಾಳ ಹೂಡಿ ನಿರ್ಮಾಣ ಮಾಡಲಾಗಿದ್ದ ‘ರಾಬರ್ಟ್’ 1400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಂಡು ಉತ್ತಮ ಪ್ರದರ್ಶನ ಕಾಣುತ್ತಿವೆ. ಇದೇ ಸಂದರ್ಭದಲ್ಲಿ, ಕಿಡಿಗೇಡಿಗಳು ಈ ಸಿನಿಮಾವನ್ನು ಮೊಬೈಲ್ನಲ್ಲಿ ಶೂಟ್ ಮಾಡಿ, ಆನ್ಲೈನ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದರಿಂದ ಕಂಗಾಲಾದ ಚಿತ್ರ ತಂಡವು ಸೈಬರ್ ಕ್ರೈಮ್ ಪೊಲೀಸರ ಮೊರೆ ಹೋಗಿದೆ. ಸುಮಾರು 3000 ಪೈರಸಿ ಲಿಂಕ್ಗಳು ಈವರೆಗೆ ಪತ್ತೆಯಾಗಿವೆ ಎನ್ನಲಾಗಿದೆ.