ಬೆಂಗಳೂರು: ಮಾರಣಾಂತಿಕ ಸೋಂಕು ಕೊರೋನಾ ವೈರಾಣು ದೇಶಕ್ಕೆ ಕಾಲಿಟ್ಟು ವರ್ಷ ಕ್ರಮಿಸಿದೆ. ತಿಂಗಳ ಹಿಂದೆ ಈ ಸೋಂಕಿನ ಅಬ್ಬರ ಕಡಿಮೆಯಾಯಿತು ಎನ್ನುವಷ್ಟರಲ್ಲಿ ಈಗ ಸೋಂಕಿನ ಪ್ರಮಾಣ ಮತ್ತೆ ಹೆಚ್ಚಳಚಾಗುತ್ತಿದೆ. ಕೇರಳ, ಮಹಾರಾಷ್ಟ್ರ ಸಹಿತ ಕರ್ನಾಟಕಕ್ಕೆ ಸಮೀಪವಿರುವ ಕೆಲವು ರಾಜ್ಯಗಳಲ್ಲಿ ಸೋಂಕಿನ ಪ್ರಮಾಣ ಆತಂಕಕಾರಿ ಮಟ್ಟದಲ್ಲಿರುವುದರಿಂದ ಇತ್ತ ಕರ್ನಾಟಕದಲ್ಲೂ ಅಲರ್ಟ್ ಘೋಷಿಸಲಾಗಿದೆ.
ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಭೀತಿ ಉಂಟಾಗಿದ್ದು ಹಲವು ದಿನಗಳಿಂದ ಸೋಂಕಿತರ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗಿದೆ. ಈ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ಕಠಿಣ ನಿಯಮ ಜಾರಿ ಮಾಡಿದೆ.
ಏನಿದು ಹೊಸ ಗೈಡ್‌ಲೈನ್ಸ್?
- ಹೊಸ ಮಾರ್ಗಸೂಚಿಯಂತೆ ತೆರೆದ ಪ್ರದೇಶದಲ್ಲಿ ಮದುವೆ ಕಾರ್ಯಕ್ರಮಕ್ಕೆ 500 ಜನ, ಹಾಲ್ ಗಳಲ್ಲಿ ಮದುವೆ ಕಾರ್ಯಕ್ರಮಕ್ಕೆ 200 ಜನ ಮೀರುವಂತಿಲ್ಲ.
- ಹುಟ್ಟುಹಬ್ಬ ಆಚರಣೆ ಸಂದರ್ಭದಲ್ಲೂ ಅದೇರೀತಿ ಮಾರ್ಗಸೂಚಿ. ತೆರೆದ ಪ್ರದೇಶದಲ್ಲಿ 100 ಜನ, ಹಾಲ್ ಗಳಲ್ಲಿ 50 ಜನರಷ್ಟೇ ಭಾಗವಹಿಸಬಹುದು.
- ಅಂತ್ಯಕ್ರಿಯೆ ಸಂದರ್ಭದಲ್ಲಿ 50 ಜನರು ಮಾತ್ರ ಸೇರಬಹುದು.
- ಉತ್ಸವ, ಸಭೆ, ಸಾರ್ವಜನಿಕ ಸಮಾರಂಭಗಳಲ್ಲಿ 500 ಜನರಿಗಷ್ಟೇ ಅವಕಾಶ ಕಲ್ಪಿಸಬೇಕಿದೆ.
ನೆರೆ ರಾಜ್ಯಗಳಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎರಡನೇ ಅಲೆ ಬರದಂತೆ ನಿಯಂತ್ರಿಸಲು ಕೆಲ ಜಿಲ್ಲೆಗಳಲ್ಲಿ ಕೋವಿಡ್ ಪರೀಕ್ಷೆಯ ಗುರಿಯನ್ನು ಹೆಚ್ಚಿಸಲಾಗಿದೆ.
ಹೆಚ್ಚಿನ ಜನಸಂದಣಿ ತಡೆಗಟ್ಟಲು ಮದುವೆ ಇನ್ನಿತರ ಆಚರಣೆ, ಧಾರ್ಮಿಕ, ರಾಜಕೀಯ ಸಭೆ-ಸಮಾರಂಭಗಳಿಗೆ ನೂತನ ನಿಯಮಗಳನ್ನು ಜಾರಿ ಮಾಡಲಾಗಿದೆ.@DHFWKA pic.twitter.com/fdq8vH6wvE
— Dr Sudhakar K (Modi ka Parivar) (@DrSudhakar_) March 12, 2021