ಗದಗ; ಇದೀಗ ಸಮುದಾಯಗಳ ಹೋರಾಟದ ಪರ್ವ. ಕುರುಬರ ಸಮುದಾಯದ ಹೋರಾಟದ ಹಾದಿಯಲ್ಲೇ ವಾಲ್ಮಿಕಿ ಹಾಗೂ ಲಿಂಗಾಯತ ಸಮುದಾಯಗಳೂ ಸಾಗಿದ್ದು, ಇದೀಗ ವಿಶ್ವಕರ್ಮ ಸಮುದಾಯದವರೂ ರಣಕಹಳೆ ಊದಿದ್ದಾರೆ.
ವಿಶ್ವಕರ್ಮ ಸಮುದಾಯಕ್ಕೆ ಒಳ ಮೀಸಲಾತಿ ನೀಡಬೇಕು ಎಂದು ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬು ಪತ್ತಾರ ಅಗ್ರಹಿಸಿದ್ದಾರೆ. ಗದಗ್‌ನಲ್ಲಿ ಈ ಕುರಿತು ಮಾತನಾಡಿದ ಆವರು, 2 ಎ ಮೀಸಲಾತಿಯಲ್ಲಿ ಇತರೆ ಸಮಾಜದವರು ಬಂದ್ರೆ ನಮಗೆ ಬಹಳ ಕಷ್ಟವಾಗುತ್ತದೆ. ಹಾಗಾಗಿ ಒಳ ಮೀಸಲಾತಿ ನೀಡುವಂತೆ ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದರು.
ನಮಗೆ ಒಳ ಮೀಸಲಾತಿ ನೀಡಿದ್ರೆ ರಾಜಕೀಯವಾಗಿ,
ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಅವಕಾಶ ಸಿಗುತ್ತದೆ. ನಮ್ಮಲ್ಲಿ ಕೆಲವರು ಎಸ್ಟಿ ಸೇರಿಸಬೇಕು ಅಂತಾ ಹೇಳುತ್ತಿದ್ದಾರೆ. ಸಮುದಾಯದ ಹಿರಿಯರು ಹಾಗೂ ಸ್ವಾಮೀಜಿಗಳ ಜೊತೆಗೆ ಚರ್ಚೆ ಮಾಡಿ, ಯಾವ ರೀತಿ ಮುಂದೆ ಯಾವ ನಡೆ ಅನುಸರಿಸಬೇಕೆಂಬ ಬಗ್ಗೆ ನಿರ್ಧರಿಸಲಾಗಿವುದು ಎಂದು ಅವರು ತಿಳಿಸಿದರು.