ತಾವು ರಾಜೀನಾಮೆ ನೀಡಿಲ್ಲ ಎಂದೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ಪಷ್ಟನೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಾವು ಬಿಜೆಪಿಗೆ ರಾಜಿನಾಮೆ ಕೊಟ್ಟಿರುವ ಪತ್ರ ಹರಿದಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಜಗದೀಶ್ ಶೆಟ್ಟರ್, ಅದು ಫೇಕ್ ಪತ್ರ. ನಾನು ರಾಜಿನಾಮೆ ಕೊಟ್ಟಿಲ್ಲ, ಅದು ನಾನು ಬರೆದ ಪತ್ರವಲ್ಲ. ಪತ್ರ ಬರೆಯುವುದಿದ್ದರೆ ಅದು ಇಂಗ್ಲೀಷ್‌ನಲ್ಲಿ ಇರುತ್ತಿತ್ತು. ಪ್ರೈಮಾಫಸಿ ಪ್ರಕಾರ ಅದು ಫೇಕ್ ಪತ್ರ ಅನ್ನೋದು ಕಾಣಿಸುತ್ತೆ. ಯಾರೋ ಕುತಂತ್ರದಿಂದ ಹೀಗೆ ಮಾಡಿದ್ದಾರೆ ಎಂದವರು ಸ್ಪಷ್ಟಪಡಿಸಿದರು.
ನನಗೆ ಈ ಕ್ಷಣದವರೆಗೂ ಟಿಕೆಟ್ ಸಿಗುವ ನಿರೀಕ್ಷೆಯಿದೆ ಎಂದ ಶೆಟ್ಟರ್, ನಾಳೆಯವರೆಗೆ ಕಾಯ್ದು ನೋಡೋಣ ಎಂದರು.