ದಾವಣಗೆರೆ: ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಶಾಸಕ ಎಂ.ಪಿ.ರೇಣುಕಾಚಾರ್ಯ ಇದೀಗ ಜನಾನುರಾಗಿ ಶಾಸಕ. ಕೋವಿಡ್ ಸೋಂಕಿತರ ಬಗೆಗಿನ ಅವರ ಕಾಳಜಿ ಕುರಿತ ಫೊಟೋ, ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ.
ಅಧಿಕಾರದ ಆಸೆಗೆ ಮುಖ್ಯಮಂತ್ರಿ ಬದಲಾವಣೆ ಮಾಡಲು ದೆಹಲಿಗೆ ಹೋಗಿ ಕಚಡ ರಾಜಕಾರಣ ಮಾಡುತ್ತಿರುವವರ ಬದಲು,
ಹಳ್ಳಿ ಜನರಿಗೆ ಸಂಕಷ್ಟ ಬಂದು ಕೋವಿಡ್ ಆರೈಕೆ ಕೇಂದ್ರದಲ್ಲಿರುವ ನನ್ನ ಸೋಂಕಿತ ಬಂಧುಗಳ ನೋವನ್ನ ದೂರ ಮಾಡಲು ಅವರ ಹಿತಕ್ಕಾಗಿ ಕುಣಿತ ಹಾಕಿ ಮನರಂಜಿಸಿದೆ.#Unite2FightCorona pic.twitter.com/OVKwkn28ST
— M P Renukacharya (ನಾನು ಮೋದಿ ಪರಿವಾರ) (@MPRBJP) May 26, 2021
ಅವರ ಜೊತೆಗಿರುವ ಕಾರ್ಯಕರ್ತರೇ ಅವರ ಮಾಧ್ಯಮ, ಸಂವಹನ ಕಾರ್ಯಕರ್ತರೂ ಹೌದು. ಅದರಲ್ಲೂ ಹೋದಲ್ಲಿ ಬಂದಲ್ಲೆಲ್ಲಾ ರೇಣುಕಾಚಾರ್ಯ ಅವರು ನೃತ್ಯ ಮಾಡುವ ಸನ್ನಿವೇಶ ಸೃಷ್ಟಿಯಾಗುತ್ತಿದೆ. ಅವರೊಂದಿಗೆ ಸ್ಟೆಪ್ ಹಾಕುವ ಹುಡುಗರಿಗೂ ಅದೇನೋ ಖುಷಿ.
‘ರೇಣುಕಾಚಾರ್ಯ ಅವರ ಕಿಸ್ ವಿವಾದವನ್ನು ಅಪರಾಧವೆಂಬಂತೆ ಗಂಟೆಗಟ್ಟಲೆ ತೋರಿಸಿರುವ ಮಾಧ್ಯಮಗಳು ಪ್ರಸ್ತುತ ರೇಣುಕಾಚಾರ್ಯ ಅವರು ಕೋವಿಡ್ ರೋಗಿಗಳ ಸಲುವಾಗಿ ಮಾಡುತ್ತಿರುವ ಸೇವೆ ಬಗ್ಗೆ ತೋರಿಸುತ್ತಿಲ್ಲವೇಕೆ’ ಎಂದೂ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸತೊಡಗಿದ್ದಾರೆ.
ಅದಾಗಲೇ ಟ್ವಿಟ್ಟರ್‌ನಲ್ಲಿ ಪೋಸ್ಟ್ ಹಾಕಿರುವ ಶಾಸಕ ರೇಣುಕಾಚಾರ್ಯ, ತನ್ನ ಈ ನೃತ್ಯ ರಹಸ್ಯವನ್ನೂ ಹೇಳಿಕೊಂಡಿದ್ದಾರೆ. ಎದುರಾಳಿ ರಾಜಕೀಯ ನಾಯಕನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.
ಅಧಿಕಾರದ ಆಸೆಗೆ ಮುಖ್ಯಮಂತ್ರಿ ಬದಲಾವಣೆ ಮಾಡಲು ದೆಹಲಿಗೆ ಹೋಗಿ ಕಚಡ ರಾಜಕಾರಣ ಮಾಡುತ್ತಿರುವವರ ಬದಲು, ಹಳ್ಳಿ ಜನರಿಗೆ ಸಂಕಷ್ಟ ಬಂದು ಕೋವಿಡ್ ಆರೈಕೆ ಕೇಂದ್ರದಲ್ಲಿರುವ ನನ್ನ ಸೋಂಕಿತ ಬಂಧುಗಳ ನೋವನ್ನ ದೂರ ಮಾಡಲು ಅವರ ಹಿತಕ್ಕಾಗಿ ಕುಣಿತ ಹಾಕಿ ಮನರಂಜಿಸಿದೆ ಎಂದು ರೇಣುಕಾಚಾರ್ಯ ಅವರು ಹೇಳಿಕೊಂಡಿದ್ದಾರೆ.