ಬೆಂಗಳೂರು: ರೈತರ ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ರದ್ದು ಮಾಡುವ ಬಗ್ಗೆ , ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆಯುವ ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಕಳಿಸಲು ಸಮ್ಮತಿಸಲಾಗಿದೆ.
ಕಳೆದ ಐದು ತಿಂಗಳ ಹಿಂದೆ ರಿಸರ್ವ್ ಬ್ಯಾಂಕ್ ಮುಂದೆ ರೈತರ ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ರದ್ದು ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರ ಸಂಘ, ಪ್ರತಿಭಟನೆ ನಡೆಸಿದಾಗ ಸಭೆ ಕರೆಯುವ ಭರವಸೆ ನೀಡಿ ಹುಸಿಗೊಳಿಸಿದ ನಡೆ ವಿರುದ್ಧ ಕಳೆದ ಎಂಟು ದಿನಗಳಿಂದ ಧರಣಿ ನಡೆಸುತ್ತಿರುವ ರೈತರು ರಿಸರ್ವ್ ಬ್ಯಾಂಕ್ ಮುಂದೆ ಚಳುವಳಿಗೆ ಮುಂದಾದರು. ಈ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ಮಾತುಕತೆ ನಡೆಸಿ ಇಂದು ಬ್ಯಾಂಕುಗಳ ಮುಖ್ಯಸ್ಥರು ರೈತ ಪ್ರತಿನಿಧಿಗಳ ಸಭೆ ಏರ್ಪಡಿಸಿದ್ದರು.
ರೈತರ ಬೇಡಿಕೆಗಳು:
-
ರೈತರಿಗೆ ಕೃಷಿ ಸಾಲ ನೀಡುವಾಗ ಸಿಬಿಲ್ ಸ್ಕೋರ್ ಮಾನದಂಡ ಪರಿಗಣಿಸಬಾರದು,
-
ಕೃಷಿ ಸಾಲಗಳಿಗೆ ನೀಡುವ ರೈತರ ಎಲ್ಲ ಸಾಲದ ಬಡ್ಡಿ ಶೇಕಡ 01ಕೆ ಇಳಿಸಬೇಕು
-
ದೇಶದ ಜನರಿಗೆ ಆಹಾರ ಉತ್ಪಾದನೆ ಮಾಡುವ ವಲಯವಾದ ಕಾರಣ, ಕಿಸಾನ್ ಯೋಜನೆ, ಬೆಳೆವಿಮೆ, ಹಾಲು ಮಾರಾಟ ಸಹಾಯಧನ ಇತರೆ ಸಹಾಯಧನವನ್ನು ಹಣ ಬೇರೆ ಹಳೆಯ ಸಾಲಗಳಿಗೆ ಜಮಾ ಮಾಡಬಾರದು
-
ರೈತ ಮಕ್ಕಳ ವಿದ್ಯಾಭ್ಯಾಸ ಸಾಲವನ್ನು ನೀಡುವಾಗ ಪೋಷಕರ ಸಿಬಿಲ್ ಸ್ಕೋರ್, ಬಾಕಿ ಸಾಲಕ್ಕೆ ಲಿಂಕ್ ಮಾಡಬಾರದು.
-
ರೈತನ ಕೃಷಿ ಕಾರ್ಯಗಳಿಗೆ ಮನೆ ನಿರ್ಮಾಣ, ಕೃಷಿ ಉಪಕರಣಗಳ ಖರೀದಿ, ಕೃಷಿ ಗೃಹ ಕೈಗಾರಿಕೆ, ಸಾಲ ನೀಡುವಾಗ ಸಮಯಕ್ಕೆ ಸರಿಯಾಗಿ ಅಗತ್ಯಕ್ಕೆ ತಕ್ಕಷ್ಟು ಸಾಲಗಾರನ ಭೂಮಿ ಮೌಲ್ಯದ ಶೇ 70 ರಷ್ಟು ಸಾಲ ಮಂಜೂರು ಮಾಡಿ ಅವರ ಅಗತ್ಯಕ್ಕೆ ತಕ್ಕಂತೆ ಸಕಾಲಕ್ಕೆ ನೀಡಬೇಕು,
-
ಕೃಷಿ ಉಪಕರಣಗಳಿಗೆ ನೀಡಿದ ಸಾಲಗಳಿಗೆ ಮರುಪಾವತಿಗೆ ಹೆಚ್ಚಿನ ಕಾಲಾವಕಾಶ ನೀಡಬೇಕು.
-
ಕೃಷಿ ಉತ್ಪನ್ನ ಆಧಾರಿತ ಕೈಗಾರಿಕೆಗಳನ್ನು ಪ್ರಾರಂಭಿಸುವ ರೈತರಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ನೀಡಿ ಪ್ರೋತ್ಸಾಹಿಸಬೇಕು.
-
ಎಲ್ಲಾ ಬ್ಯಾಂಕ್ ಶಾಖೆಗಳಲ್ಲಿ ಕೃಷಿ ಪರಿಣಿತ, ಕನ್ನಡ ಭಾಷೆಯ ಅಧಿಕಾರಿಗಳು ಕಡ್ಡಾಯವಾಗಿ ಇರಬೇಕು.
-
ಫಾರ್ಮ್ ಹೌಸ್ ಕೃಷಿಕರ ಮನೆ ಮತ್ತು ಕೃಷಿ ಗೋಧಾಮುಗಳ ನಿರ್ಮಾಣಕ್ಕೆ ದುರಸ್ತಿ ವಿಸ್ತರಣೆ ಆದ್ಯತೆ ನೀಡಿ ಕಡಿಮೆ ಬಡ್ಡಿಯಲ್ಲಿ ಸಾಲ ನೀಡಬೇಕು.
-
ಕೃಷಿ ಚಟುವಟಿಕೆಗೆ ಬೆಳೆ ಸಾಲ ನೀತಿ ರೂಪಿಸುವ ಸಭೆಗಳಿಗೆ ಆಯಾ ಭಾಗದ ರೈತ ಪ್ರತಿನಿಧಿಗಳನ್ನು ಆಹ್ವಾನಿಸಿ ಸಲಹೆ ಪಡೆದು ಸಾಲನೀತಿ ರೂಪಿಸಬೇಕು.
-
ಕೋಯ್ಲೊತ್ತರ ಕೃಷಿ ಕೈಗಾರಿಕೆಗೆ, ಕೃಷಿ ಆಧಾರಿತ ಉದ್ಯೋಗ ಘಟಕಗಳಿಗೆ ವಿಶೇಷ ನೆರವು ಪ್ರೋತ್ಸಾಹ ನೀಡಬೇಕು
-
ಕಬ್ಬು ಬೆಳೆಗಾರ ರೈತರಿಗೆ ಕಡಿಮೆ ಬಡ್ಡಿ ಸಾಲ ನೀಡಬೇಕು ಸಾಲ ಮರುಪಾವತಿ ಪಾವತಿ ಅವಧಿ 20 ತಿಂಗಳಿಗೆ ವಿಸ್ತರಿಸಬೇಕು,
-
ಸಕ್ಕರೆ ಕಾರ್ಖಾನೆಗಳಿಂದ ಮತ್ತು ಖರೀದಿದಾರರಿಂದ ಬರುವ ಬಾಕಿ ಇದ್ದಾಗ ರೈತರಿಗೆ ಮರುಪಾವತಿಗೆ ಕಿರುಕುಳ ನೀಡದೆ, ಮುಂದಿನ ಹಂಗಾಮಿಗೆ ತುರ್ತು ಸಾಲ ನೀಡಬೇಕು
-
ರೈತ ಉತ್ಪಾದಕ ಸಂಸ್ಥೆಗಳಿಗೆ ನೀಡುವ ಸಾಲಗಳಿಗೆ ಬಡ್ಡಿ ಶೇ 7ಕೆ ಇಳಿಸಬೇಕು.
-
ಸರ್ಕಾರ ಜಾರಿಗೆ ತರುವ ಯಾವುದೇ ಕೃಷಿ ಸಾಲ ನೀತಿಗಳನ್ನು ಬ್ಯಾಂಕುಗಳ ಮುಂದೆ ಕಡ್ಡಾಯವಾಗಿ ಬಿತ್ತಿಫಲಕದಲ್ಲಿ ಪ್ರಕಟಿಸಬೇಕು
-
ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕುಗಳು ರೈತರಿಗೆ ನೀಡುವ ಸಾಲ ಮಂಜೂರು ಮಾಡುವಾಗ ಬ್ಯಾಂಕ್ ಅಧಿಕಾರಿಗಳಿಂದ ಆಗುವ ಕಿರುಕುಳ ತೊಂದರೆ ತಪ್ಪಿಸಬೇಕು.
ರಾಜ್ಯ ರೈತ ಸಂಘಟನೆಗಳ ಒಕ್ಕೂಟ ರಾಜ್ಯ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಈ ಪ್ರಮುಖ ಬೇಡಿಕೆಗಳನ್ನು ರೈತ ಸಂಘಟನೆಗಳ ಪ್ರಮುಖರು ಆರ್.ಬಿ.ಐ.ಅಧಿಕಾರಿಗಳ ಮುಂದಿಟ್ಟರು. ಇದಕ್ಕೆ ಸಾಕ್ಷಿಪೂರ್ವಕವಾಗಿ ಕೆಲವು ರೈತರ ಸಮಸ್ಯೆಗಳ ಪಟ್ಟಿ ಮಾಡಿ ಅರ್ ಬಿ ಐ ಮುಖ್ಯಕಾರ್ಯನಿರ್ವಾಹಕ ವ್ಯವಸ್ಥಾಪಕ ಏ ಕೆ ಪಾಠಕ್ ರವರಿಗೆ ಒತ್ತಾಯ ಪತ್ರ ಸಲ್ಲಿಸಲಾಯಿತು, ಸಭೆಯಲ್ಲಿ ರಾಜ್ಯಮಟ್ಟದ ಬ್ಯಾಂಕ್ಗರಗಳ ಸಮಿತಿಯ ಮುಖ್ಯಸ್ಥ ಪಾರ್ಶ್ವನಾಥ್, ರೈತ ಸಂಘಟನೆಯ ಮುಖಂಡರಾದ ಸುರೇಶ್ ಮಾ ಪಾಟೀಲ್, ರಮೇಶ್ ಉಗಾರ್, ಲಕ್ಷ್ಮೀದೇವಿ, ಹತ್ತಹಳ್ಳಿ ದೇವರಾಜ್, ಸಭೆಯಲ್ಲಿ ಭಾಗವಹಿಸಿದರು
























































ರೈತರ ಬೇಡಿಕೆಗಳು: 