ಅಯೋಧ್ಯೆ: ಶ್ರೀರಾಮನ ಜನ್ಮಸ್ಥಾನದಲ್ಲಿ ಇದೀಗ ನಿತ್ಯವೂ ‘ರಾಮೋತ್ಸವ’. ನೂತನವಾಗಿ ಲೋಕಾರ್ಪಣೆಯಾಗಿರುವ ಶ್ರೀರಾಮ ಮಂದಿರಕ್ಕೆ ಭಕ್ತ ಸಾಗರವೇ ಹರಿದುಬರುತ್ತಿದೆ.
ಶ್ರೀ ಬಾಲರಾಮನ ಪ್ರತಿಷ್ಟಾಪಣೆ ನಂತರ ಆಸ್ತಿಕ ಸಮುದಾಯಕ್ಕೆ ದೇವರ ದರ್ಶನದ ಕುತೂಹಲ. ಆಧುನಿಕ ದೇಗುಲದಲ್ಲಿ ಪುರಾಣವವೈಭವ ಮರುಕಳಿಸಿರುವುದನ್ನು ಕಣ್ತುಂಬಿಕೊಳ್ಳುವ ಕಾತುರದಲ್ಲಿರುವ ಭಕ್ತರು ಅಯೋಧ್ಯೆಯತ್ತ ಮುಖಮಾಡಿದ್ದಾರೆ.
ಅಯೋಧ್ಯೆ ಕ್ಷೇತ್ರ ಲೋಕಾರ್ಪಣೆಯಾದ ನಂತರದ ಮೊದಲ ದಿನವೇ 4 ಲಕ್ಷಕ್ಕೂ ಹೆಚ್ಚು ಜನರು ಈ ಪುಣ್ಯಭೂಮಿಗೆ ಭೇಟಿ ನೀಡಿದ್ದಾರೆ. ಲಕ್ಷಾಂತರ ಜನರು ಏಕಾಏಕಿ ಭೇಟಿ ನೀಡಿದ್ದರಿಂದಾಗಿ ದೇವರ ದರ್ಶನ ಭಾಗ್ಯ ಅರ್ಧದಷ್ಟು ಮಂದಿಗೆ ಮಾತ್ರ ಸಾಧ್ಯವಾಗಿದೆ ಎಂದು ಮೂಲಗಳೂ ತಿಳಿಸಿವೆ.
ಈ ನಡುವೆ, ಶ್ರೀರಾಮ ಮಂದಿರವನ್ನು ಕಣ್ತುಂಬಿಕೊಳ್ಳುವ ಉದ್ದೇಶದಿಂದ ಲಕ್ಷಾಂತರ ಜನರು ಅಯೋಧ್ಯೆಗೆ ದೌಡಾಯಿಸುತ್ತಿದ್ದು ಜನಸಂದಣಿ ನಡುವೆ ಪರಿಸ್ಥಿತಿ ನಿಭಾಯಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಸೋಮವಾರ ಪ್ರಾಣಪ್ರತಿಷ್ಠಾಪಿತನಾದ ಶ್ರೀರಾಮನ ವಿಗ್ರಹವನ್ನು ಮಂಗಳವಾರ ಸಾರ್ವಜನಿಕ ದರ್ಶನಕ್ಕೆ ಮುಕ್ತಗೊಳಿಸಲಾಗಿತ್ತು. ಹಾಗಾಗಿ ಭಕ್ತಸಾಗರ ಜಮಾಯಿಸಿದ್ದರಿಂದಾಗಿ ದೇಗುಲದಲ್ಲಿ ಮೊದಲ ದಿನವೇ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಸೂಕ್ತ ಭದ್ತತಾ ವ್ಯವಸ್ಥೆ ಕಲ್ಪಿಸಲಾಗಿದೆ.

























































