ಮಂಗಳೂರು: ಪ್ರವೀಣ್ ನೆಟ್ಟಾರ್ ಪತ್ನಿಯ ಉದ್ಯೋಗದ ಬಗ್ಗೆ ಬಿಜೆಪಿಯವರು ಕೀಳುಮಟ್ಟದ ರಾಜಕೀಯ, ನಾಟಕ ಮಾಡುವುದನ್ನು ನಿಲ್ಲಿಸಲಿ. ಇವರ ಇಂತಹ ಕಪಟ ನಾಟಕ ಸಾಮಾನ್ಯ ಜನತೆಗೆ ಈಗಾಗಲೇ ತಿಳಿದಿದೆ ಎಂದು ಬಿಲ್ಲವ ಸಮುದಾಯದ ಮುಖಂಡರೂ ಆದ ಮಂಗಳೂರಿನ ಗೋಕರ್ಣನಾಥೇಶ್ವರ ಕ್ಷೇತ್ರದ ಖಜಾಂಚಿ ಪದ್ಮರಾಜ್ ಹೇಳಿದ್ದಾರೆ.
ನೆಟ್ಟಾರು ಪತ್ನಿಯ ಉದ್ದೋಗ ಕುರಿತಂತೆ ಎದ್ದಿರುವ ವಿವಾದ ಕುರಿತಂತೆ ಬಿಜೆಪಿ ನಾಯಕರು ನೂತನ ಕಾಂಗ್ರೆಸ್ ಸರ್ಕಾರದ ವಿರುದ್ದ ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುಬಮವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯೂ ಆದ ಪದ್ಮರಾಜ್ ಅವರು, ಹಂತಕರ ಕ್ರೌರ್ಯಕ್ಕೆ ಪ್ರವೀಣ್ ನೆಟ್ಟಾರ್ ಬಲಿಯಾಗಿದ್ದು, ಅವರ ಪತ್ನಿಗೆ ಮುಖ್ಯಮಂತ್ರಿಯವರ ವಿಶೇಷ ಅಧಿಕಾರ ಬಳಸಿ ಗುತ್ತಿಗೆ ಆಧಾರದಲ್ಲಿ ಉದ್ಯೋಗ ನೀಡಲಾಗಿತ್ತು. ಸರ್ಕಾರ ಬದಲಾದಾಗ ತಾತ್ಕಾಲಿಕ ನೇಮಕಾತಿಗಳು ಸಹಜವಾಗಿ ರದ್ದಾಗುತ್ತವೆ ಎನ್ನುವುದು ಬಿಜೆಪಿಯ ಶಾಸಕರು, ಸಂಸದರಿಗೆ ಸಾಮಾನ್ಯ ತಿಳಿವಳಿಕೆಯೂ ಇಲ್ಲವೆ? ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯವರಿಗೆ ನೂತನ ಕುಮಾರಿಯವರ ಮೇಲೆ ಅಷ್ಟೊಂದು ಅಭಿಮಾನ ಇರುತ್ತಿದ್ದರೆ ಈ ಮೊದಲೇ ಯಾಕೆ ಅವರಿಗೆ ಶಾಶ್ವತ ಉದ್ಯೋಗ ಮಾಡಿಸಿಕೊಡಲು ಪ್ರಯತ್ನಿಸಿಲ್ಲ? ಎಂದು ಪ್ರಶ್ನಿಸಿದ್ದಾರೆ ಬಿಜೆಪಿಯವರು ಇಷ್ಟೂ ದಿನ ಮಾಡಿದ್ದೆಲ್ಲ ನಾಟಕ ಎಂದು ಇದರಿಂದ ಬಹಿರಂಗವಾಗಿದೆ ಎಂದು ಪದ್ಮರಾಜ್ ಅವರು ಎದುರಾಳಿ ಪಕ್ಷದ ನಾಯಕರ ಟೀಕೆಗಳಿಗೆ ಎದಿರೇಟು ಕೊಟ್ಟಿದ್ದಾರೆ.
ನೂತನ ಅವರಿಗೆ ಉದ್ಯೋಗ ನೀಡಲು ಕಾಂಗ್ರೆಸ್ ನೇತೃತ್ವದ ಸರ್ಕಾರ ಖಂಡಿತವಾಗಿಯೂ ಬದ್ಧವಾಗಿದೆ. ಈಗಾಗಲೇ ಕಾಂಗ್ರೆಸ್ ಪಕ್ಷದ ಪರವಾಗಿ ನೂತನ ಅವರಲ್ಲಿ ಮಾತುಕತೆ ನಡೆಸಿದ್ದೇವೆ. ಕೂಡಲೇ ಅವರಿಗೆ ಉದ್ಯೋಗ ಕಲ್ಪಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಪದ್ಮರಾಜ್, ಬಿಜೆಪಿಯವರು ಕೀಳುಮಟ್ಟದ ರಾಜಕೀಯದ ಮೂಲಕ ಜನರನ್ನು ಮತ್ತೆ ಮೂರ್ಖರನ್ನಾಗಿಸುವ ಕೆಲಸವನ್ನು ಬಿಡಲಿ. ಇಂತಹ ಕೀಳು ರಾಜಕೀಯ ಮುಂದೆ ನಡೆಯುವುದಿಲ್ಲ ಎಂದರು.