ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಜಿ ಕುಮಾರ್ ನಾಯಕ್ ನೇಮಕಗೊಂಡಿದ್ದಾರೆ. ಕುಮಾರ್ ನಾಯಕ್ ಅವರು, ಈ ಹಿಂದೆ ಇಂಧನ ಸಂಬಂಧಿತ ಸರ್ಕಾರಿ ಸಂಸ್ಥೆಗಳಾದ ಬೆಸ್ಕಾಂ, ಕೆಪಿಸಿಎಲ್ ಮತ್ತು ಕೆಪಿಟಿಸಿಎಲ್ ಮುಖ್ಯಸ್ಥರಾಗಿ
ಕಾಯ೯ನಿವಾ೯ಹಿಸಿದ್ದರು. ಇಲಾಖೆಯಲ್ಲಿ ರಚನಾತ್ಮಕ ಸುಧಾರಣೆಗಳನ್ನು ತರಲು ಇಲಾಖೆ ಪ್ರಯತ್ನಗಳನ್ನು ಮಾಡುತ್ತಿರುವ ಸಮಯದಲ್ಲಿ ಅವರು ನಿಯೋಜನೆಗೊಂಡಿದ್ದರು.
ಜಿ ಕುಮಾರ್ ನಾಯಕ್ ಅವರು ಇಂಧನ ಇಲಾಖೆಯಗೆ ನೇಮಕಗೊಳ್ಳುವ ಮೊದಲು
ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿ ಹಲವಾರು ಸುಧಾರಣೆಗಳನ್ನು ಜಾರಿಗೆ ಮಾಡುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು. ಸಿಬ್ಬಂಧಿಯೊಂದಿಗೂ ಅವರು ಉತ್ತಮ ಸಂಬಂಧ ಹೊಂದಿದ್ದರು.