ಬೆಂಗಳೂರು: ಪರಿಷತ್ ಚುನಾವಣೆ ಮೂಲಕ ಶಾಸನಸಭೆಯ ಸದಸ್ಯನಾಗುವ ಕನಸು ಕಂಡಿದ್ದ ಬಿ.ವೈ.ವಿಜಯೇಂದ್ರ ಅವರಿಗೆ ಈ ಬಾರಿಯೂ ಅವಕಾಶ ತಪ್ಪಿದೆ. ಈ ಬಾರಿ ಮೇಲ್ಮನೆ ಚುನಾವಣೆಯಲ್ಲಿ ಸ್ಪರ್ಧಿಸಿ ಪರಿಷತ್ ಸದಸ್ಯನಾಗುವ ಜೊತೆಗೆ, ಸಂಪುಟ ವಿಸ್ತರಣೆ ವೇಳೆ ಮಂತ್ರಿ ಸ್ಥಾನ ಸಿಗಬಹುದೆಂಬ ಲೆಕ್ಕಾಚಾರವೂ ವಿಜಯೇಂದ್ರ ಅವರದ್ದಾಗಿತ್ತು. ಆದರೆ ಅವರು ಅಂದುಕೊಂಡಂತೆ ನಡೆದಿಲ್ಲ.
ಈ ನಡುವೆ, ವಿಜಯೇಂದ್ರ ಅವರಿಗೆ ಟಿಕೆಟ್ ಕೈತಪ್ಪಿರುವ ಬಗ್ಗೆ ಅವರ ಬೆಂಬಲಿಗರು ನಿರಾಶರಾಗಿದ್ದಾರೆ. ಈ ಕಾರ್ಯಕರ್ತರನ್ನು ಸಮಾಧಾನಪಡಿಸುವ ಪ್ರಯತ್ನ ನಡೆಸಿರುವ ಬಿ.ವೈ.ವಿಜಯೇಂದ್ರ ಸುಧೀರ್ಘ ಪತ್ರವನ್ನು ಬರೆದಿದ್ದಾರೆ. ಬಿಜೆಪಿ ತನಗೆ ಈಗಾಗಲೇ ಹೆಚ್ಚಿನ ಅವಕಾಶ ನೀಡಿದೆ. ಹಾಗಾಗಿ ಬೇಸರ ಬೇಡ ಎಂದು ಆಪ್ತರಿಗೆ ಸಲಹೆ ಮಾಡಿದ್ದಾರೆ.
ಪಕ್ಷದ ಎಲ್ಲ ಸಹ ಕಾರ್ಯಕರ್ತರಲ್ಲಿ ಮತ್ತು ಅಭಿಮಾನಿಗಳಲ್ಲಿ ನನ್ನ ಮನವಿ.@BJP4Karnataka @blsanthosh @JoshiPralhad pic.twitter.com/ZLEXuPiMkW
— Vijayendra Yediyurappa (Modi Ka Parivar) (@BYVijayendra) May 24, 2022
























































