ರಾಯಚೂರು: ಪಂಚಮಸಾಲಿ ಮೀಸಲಾತಿ ಹೋರಾಟ ತೀವ್ರಗೊಂಡಿದ್ದು, ಇದೀಗ ರಕ್ತದಾಸೋಹ’ ಮೂಲಕ ಸರ್ಕಾರವನ್ನು ಎಚ್ಚರಿಸುವ ಪ್ರಯತ್ನ ನಡೆದಿದೆ. ಸ್ವತಃ ಜಗದ್ಗುರುಗಳೇ ರಕ್ತ ನೀಡುವ ಮೂಲಕ ‘ರಕ್ತ ದಾಸೋಹ’ ಹೋರಾಟಕ್ಕೆ ಚಾಲನೆ ನೀಡಿದರು.
ಈ ವರೆಗೂ ಸಭೆ, ಪಾದಯಾತ್ರೆ, ಆಂದೋಲನ ಮೂಲಕ ಪಂಚಮಸಾಲಿ ಲಿಂಗಾಯತ ಸಮುದಾಯದ ಮೀಸಲಾತಿ ನಡೆದಿದೆ. ಇದೀಗ ಸರ್ಕಾರದ ವಿರುದ್ದ ಮತ್ತೆ ಹೋರಾಟಕ್ಕಿಳಿದಿರುವ ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಜಯಮೃತ್ಯುಂಜಯ ಶ್ರೀಗಳು ರಾಜ್ಯವ್ಯಾಪಿ ಜಾಥಾ ಕೈಗೊಂಡಿದ್ದಾರೆ. ಈ ನಡುವೆ ರಾಯಚೂರು ಜಿಲ್ಲೆಯಲ್ಲಿ ‘ರಕ್ತ ನೀಡಿ ಮೀಸಲಾತಿ ಪಡೆಯುವ ಆಂದೋಲನ’ ಆರಂಭಿಸಿ ಮೀಸಲಾತಿ ಚಳುವಳಿಗೆ ಹೊಸ ತಿರುವು ನೀಡಿದ್ದಾರೆ. ಕೂಡಲಸಂಗಮ ಜಗದ್ಗುರುಗಳ ಜನ್ಮದಿನೋತ್ಸವ ಹಾಗೂ ರೈತ ದಿನಾಚರಣೆ ಅಂಗವಾಗಿ ಈ ಚಳುವಳಿ ನಡೆದಿರುವುದು ಕುತೂಹಲಕಾರಿ ಬೆಳವಣಿಗೆಯಾಗಿದೆ.
ರಾಯಚೂರು ಜಿಲ್ಲೆ ಲಿಂಗಸುರಿನಲ್ಲಿ ‘ರಕ್ತ ಕೊಡುತ್ತೇವೆ, ಮೀಸಲಾತಿ ಪಡೆಯುತ್ತೇವೆ’ ಎಂಬ ಘೋಷಣೆಯೊಂದಿಗೆ ಪ್ರಥಮ ಜಗದ್ಗುರುಗಳ ದಿವ್ಯ ಸಾನಿಧ್ಯದಲ್ಲಿ ಈ ಹೋರಾಟ ಆರಂಭವಾಗಿದೆ. ಲಿಂಗಸುರು IMA ಸಭಾಂಗಣದಲ್ಲಿ ಸ್ವಾಮೀಜಿಗಳು ರಕ್ತದಾನ ಮಾಡುತಗತಿದ್ದಂತೆಯೇ, ಇದರಿಂದ ಪ್ರೇರಿತವಾದ ನೂರಾರು ಮಂದಿ ‘ರಕ್ತ ದಾಸೋಹ’ ಮಾಡಿದರು.




















































