ಮಂಡ್ಯ: ಪ್ರತೀ ಚುನಾವಣೆಯೂ ಒಂದಿಲ್ಲೊಂದು ವಿಶೇಷತೆಯಿಮದ ಗಮನಸೆಳೆಯುತ್ತದೆ. ಈ ಬಾರಿಯ ಪಂಚಾಯತ್ ಚುನಾವಣೆ ಕೂಡಾ ಹಲವು ವಿಶೇಷತೆಗಳಿಂದ ಕೂಡಿದೆ. ಅದರಲ್ಲೂ ಮಂಡ್ಯ ಜಿಲ್ಲೆಯ ಕೌತುಕದ ಕಣವೆನಿಸಿತ್ತು. ಎರಡು ಗ್ರಾಮಗಳಲ್ಲಿ ಪತಿ ಪತ್ನಿಗೆ ವಿಜಯಮಾಲೆ ಸಿಕ್ಕಿರುವುದೇ ಅನನ್ಯ ವಿಶೇಷ.
ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾ.ಪಂ.ನಿಂದ ಸ್ಪರ್ಧೆ ಮಾಡಿದ್ದ ಇಬ್ಬರು ಪತಿ ಪತ್ನಿಯರು ಜಯಗಳಿಸಿದ್ದಾರೆ.
ಬೆಳಗೊಳದ 1 ನೇ ವಾರ್ಡ್ ನಿಂದ ಪತ್ನಿ ಅಶ್ವಿನಿ ರವಿಕುಮಾರ್, 2ನೇ ವಾರ್ಡ್’ನಿಂದ ಪತಿ ರವಿ ಕುಮಾರ್ ಆಯ್ಕೆಯಾಗಿದ್ದಾರೆ. ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾಗಿ ಈ ಜೋಡಿ ಕಣಕ್ಕಿಳಿದಿದ್ಧರು. ಪತಿ ಮೂರನೆ ಬಾರಿ ಗೆದ್ದರೆ, ಪತ್ನಿ ಇದೇ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ.
ಇದೇ ಗ್ರಾಮದ 8 ನೇ ವಾರ್ಡ್ ನಿಂದ ಪತಿ ಸುರೇಶ್ ಹಾಗೂ ಪತ್ನಿ ಪ್ರಭಾ ಸುರೇಶ್ ಗೆ ಜಯ ಸಿಕ್ಕಿದೆ. ಸಾಮಾನ್ಯ ಹಾಗೂ ಸಾಮಾನ್ಯ ಮಹಿಳಾ ವರ್ಗದಿಂದ ಸ್ಪರ್ಧಿಸಿದ್ದ ಈ ದಂಪತಿ ವಿಜಯದ ನಗೆಬೀರಿದ್ದಾರೆ.