ಬೆಂಗಳೂರು: ಪಾಂಚಮಸಾಲಿಗಳ ಹೋರಾಟ ತೀವ್ರಗೊಂಡಿದ್ದು ಬಿಜೆಪಿ ಸರ್ಕಾರಕ್ಕೆ ಸವಾಲೆಂಬಂತಾಗಿದೆ. ಪಂಚಮಸಾಲಿ ಸನುದಾಯಕ್ಜೆ 2ಎ ಮೀಸಲಾತಿ ಕಲ್ಪಿಸಬೇಕೆಂದು ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಹೋರಾಟ 50 ದಿನ ಕ್ರಮಿಸಿದೆ. 50ನೇ ದಿನವಾದ ಶನಿವಾರ ರಾಜ್ಯದ ಹಲವೆಡೆ ಪಂಚಮಸಾಲಿ ಸಮುದಾಯದವರು ಹೆದ್ದಾರಿ ತಡೆ ನಡೆಸಿ ರಾಜ್ಯ ಸರ್ಕಾರದ ನಿರ್ಲಕ್ಷ್ಯದ ವಿರುದ್ದ ಆಕ್ರೋಶ ಹೊರಹಾಕಿದರು.
ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಈ ಸತ್ಯಾಗ್ರಹಕ್ಕೆ ಪಂಚನಸಾಲಿ ಸಮುದಾಯದಿಂದ ಭಾರೀ ಬೆಂಬಲ ವ್ಯಕ್ತವಾಯಿತು.