ದೆಹಲಿ: ಪ್ರತಿಷ್ಠಿತ ಅಮೆಜಾನ್ ಕಂಪನಿ ಹಿಂದೂ ವಿರೋಧಿ ಕೃತ್ಯಗಳನ್ನು ಪ್ರೋತ್ಸಾಹಿಸುತ್ತಿದೆಯೇ? ಮಾಧ್ಯಮ ವರದಿಯು ಇಂಥದ್ದೊಂದು ಅನುಮಾನವನ್ನು ಹುಟ್ಟು ಹಾಕಿದೆ.
Crackdown on foreign Christian missionaries by certain North East Governments exposes the sinister designs, visa violations, and corporate nexus in changing the demography of the region#CoverStory #CrossConnection #ProselytisationInNorthEast pic.twitter.com/llUUe4j0qe
— Organiser Weekly (@eOrganiser) November 14, 2022
ಇ-ಕಾಮರ್ಸ್ ಕ್ಷೇತ್ರದಲ್ಲಿ ದಿಗ್ಗಜನೆನಿಸಿರುವ ಅಮೆಜಾನ್ ಸಂಸ್ಥೆ ಭಾರತೀಯ ಮಾರುಕಟ್ಟೆಯಲ್ಲಿ ಪಾರುಪತ್ಯ ಮೆರೆದಿದೆ. ಇದೀಗ ಇದೇ ಕಂಪನಿ ಕುರಿತ ಮಾಹಿತಿ ಚರ್ಚೆಯ ಮುನ್ನಲೆಗೆ ಬಂದಿದೆ. ಆರೆಸ್ಸೆಸ್‌ನ ರಾಷ್ಟ್ರೀಯವಾದದ ಸಿದ್ದಾಂತವನ್ನು ಪ್ರತಿಪಾದಿಸುತ್ತಿರುವ ‘ಆರ್ಗನೈಸರ್’ ಸಾಪ್ತಾಹಿಕ ಇಂಥದ್ದೊಂದು ಸಂಗತಿಯತ್ತ ಬೆಳಕುಚೆಲ್ಲಿದೆ ಎಂಬ ವಿಚಾರ ತಲ್ಲಣ ಸೃಷ್ಟಿಸಿದೆ.
ಅಮೆಜಾನ್ ಕಂಪನಿಯ ವಿರುದ್ದ ಅಕ್ರಮ ಹಣ ವರ್ಗಾವಣೆಯ ಆರೋಪ ಕೇಳಿಬರುತ್ತಿದೆ. ಅಷ್ಟೇ ಅಲ್ಲ, ಮತಾಂತರಕ್ಕೂ ಕುಮ್ಮಕ್ಕು ನೀಡುತ್ತಿದೆ ಎಂಬ ವಿಷಯಗಳನ್ನು ‘ಆರ್ಗನೈಸರ್’ ತನ್ನ ಲೇಖನದಲ್ಲಿ ಉಲ್ಲೇಖಿಸಿದೆ ಎನ್ನಲಾದ ವಿಚಾರ ಆರೆಸ್ಸೆಸ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮತಾಂತರದಲ್ಲಿ ಪ್ರಮುಖ ಪಾತ್ರ ವಹಿಸಿದೆ ಎನ್ನಲಾದ ಅಮೆರಿಕನ್ ಬ್ಯಾಪ್ಟಿಸ್ಟ್ ಚರ್ಚ್‌ಗೆ ಹಣಕಾಸು ನೆರವು ನೀಡುತ್ತದೆ ಎಂಬ ವರದಿಯ ವಿಶ್ಲೇಷಣೆ ಕೂಡಾ ಗಂಭೀರ ಚಿಂತನೆಗೆ ಕಾರಣವಾಗಿದೆ. ಈಶಾನ್ಯ ಭಾರತ ಹಾಗೂ ದೇಶದ ವಿವಿಧೆಡೆ ಮತಾಂತರ ನಿರತ ಮಿಷನರಿಗಳ ಬಗ್ಗೆ ಈ ಸಂಸ್ಥೆ ಸಹಾನುಭೂತಿ ಹೊಂದಿದೆ ಎಂದೂ ವರದಿ ಬೊಟ್ಟು ಮಾಡಿದೆ ಎಂಬುದೇ ಗಂಭೀರ ವಿಷಯವೆನಿಸಿದೆ ಎಂದು ಆರೆಸ್ಸೆಸ್ ಕಾರ್ಯಕರ್ತರು ಹೇಳುತ್ತಿದ್ದಾರೆ.
ಆರ್ಗನೈಸರ್ ಪತ್ರಿಕೆಯು ಆರೆಸ್ಸೆಸ್ ಸಿದ್ದಾಂತದ ಪ್ರತಿಬಿಂಬವಾಗಿದ್ದು, ಸಂಘದ ವಿಚಾರಧಾರೆಗಳಿಗೆ ತಕ್ಕಂತಹಾ ಕೃತಿಗಳಿಗೆ ಪ್ರಾಧಾನ್ಯತೆ ನೀಡುತ್ತದೆ. ಇದೀಗ ಈ ಸಾಪ್ತಾಹಿದಲ್ಲಿನ ಅಮೆಜಾನ್ ಕುರಿತು ಪ್ರಕಟಿಸಿದೆ ಎನ್ನಲಾದ ವರದಿಯತ್ತ ಇತರ ರಾಷ್ಟ್ರೀಯ ಮಾಧ್ಯಮಗಳೂ ಸುದ್ದಿ ಮೂಲಕ ವಿಶ್ಲೇಷಣೆ ಮಾಡಿವೆ. ಆರೆಸ್ಸೆಸ್ ಹಿತಚಿಂತಕರ ವಲಯದಲ್ಲೂ ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿದೆ.

























































