ಬೆಂಗಳೂರು: ಭಾರತ ದೇಶದ ರಕ್ಷಣೆಗಾಗಿ ದುಡಿಯುವ ಆರ್ಮಿ, ಏರ್ ಪೋರ್ಸ್, ನೇವಿಗೆ ಇರುವ ಸೌಲಭ್ಯ ಬಿಎಸ್ಎಫ್, ಸಿಆರ್‌ಪಿಎಫ್, ಸಿಐಎಸ್ ಎಫ್, ಐಟಿಬಿಪಿ, ಎಸ್ ಎಸ್ ಬಿ ಸೈನಿಕರಿಗೆ ಸಿಗುತ್ತಿಲ್ಲ, ಅರೆಸೇನಾ ಪಡೆಯ ಯೋಧರಿಗೂ ಒನ್ ರ್ಯಾಂಕ್ ಒನ್ ಪೆನ್ಷನ್ ವ್ಯವಸ್ಥೆ ಜಾರಿಗೆ ಅರೆಸೇನಾ ಪಡೆಗಳ ಮಾಜಿಯೋಧರ ಕ್ಷೇಮಾಭಿವೃದ್ಧಿ ಸಂಘ ಒತ್ತಾಯಿಸಿದೆ.
ಯಲಹಂಕದ ಸಿಆರ್ ಪಿಎಫ್ ಸೆಂಟರ್ ನಲ್ಲಿ ಅರೆಸೇನಾ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ಪ್ರಮುಖರು ತಮ್ಮ ಬೇಡಿಕೆಗಳ ಬಗ್ಗೆ ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಅರೆಸೇನಾ ಪಡೆಗಳ ಮಾಜಿಯೋಧರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ನಿವೃತ್ತ ಎಡಿಜಿ ಹೆಚ್.ಆರ್ ಸಿಂಗ್, ಪ್ರಧಾನ ಕಾರ್ಯದರ್ಶಿ ರಣಬೀರ್ ಸಿಂಗ್, ಕರ್ನಾಟಕ ವಿಭಾಗದ ಅಧ್ಯಕ್ಷರಾದ ಬಿ.ಹನುಮಂತರಾಜು ಮಾತನಾಡಿದರು.
ಕರ್ನಾಟಕ ವಿಭಾಗದ ಅಧ್ಯಕ್ಷರಾದ ಬಿ.ಹನುಮಂತರಾಜು ಮಾತನಾಡಿ, ಭಾರತ ರಕ್ಷಣಾ ಇಲಾಖೆ ಅಧಿನದಲ್ಲಿರುವ ಆರ್ಮಿ, ಏರ್ ಫೋರ್ಸ್ ಮತ್ತು ನೇವಿ ಯೋಧರಿಗೆ ಸಿಗುವ ಸೌಲಭ್ಯಗಳು ಕೇಂದ್ರ ಸರ್ಕಾರದ ಗೃಹ ವ್ಯವಹಾರಗಳ ಇಲಾಖೆಯ ಅಧಿನದಲ್ಲಿರುವ ಬಿಎಸ್ಎಫ್, ಸಿಆರ್ ಪಿಎಫ್, ಸಿಐಎಸ್ ಎಫ್, ಐಟಿಬಿಪಿ, ಎಸ್ ಎಸ್ ಬಿ ಯೋಧರಿಗೆ ಸಿಗುತ್ತಿಲ್ಲ, ಆರ್ಮಿ, ಏರ್ ಪೋರ್ಸ್, ನೇವಿ ಮಾಜಿ ಯೋಧರಿಗೆ ಮಂಡಳಿ ಸ್ಥಾಪಿಸಿರುವಂತೆ ಮಾಜಿ ಅರೆಸೇನಿಕರಿಗೂ ಅರ್ಧ ಸೈನಿಕರ ಕ್ಷೇಮಾಭಿವೃದ್ಧಿ ಸಂಘ ಸ್ಥಾಪಿಸಿ ಸರ್ಕಾರ ಸೌಲಭ್ಯ ಸಿಗುವಂತೆ ಮಾಡ ಬೇಕು, ಸಂಘ ಸ್ಥಾಪಿಸಲು ಮುಖ್ಯಮಂತ್ರಿಗಳು ಆದಷ್ಟು ಬೇಗ ಕ್ರಮ ತೆಗೆದುಕೊಳ್ಳ ಬೇಕು, ದೇಶ ಸೇವೆಯ ಸಂದರ್ಭದಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ದೆಹಲಿ ಸರ್ಕಾರ ನೀಡುವಂತೆ ಒಂದು ಕೋಟಿ ರೂಪಾಯಿ ಅನುಗ್ರಹ ರಾಶಿ ನೀಡ ಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯದಲ್ಲಿ ವಾಸವಾಗಿರುವ ಮಾಜಿ ಅರೆಸೈನಿಕರ ಜಿಲ್ಲಾವಾರು ಸಮೀಕ್ಷೆ ನಡೆಸಿ, ಆರೋಗ್ಯ ಸಮಸ್ಯೆಗಳ ನಿವಾರಣೆಗಾಗಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಿಜಿಹೆಚ್ಎಸ್ ಆರೋಗ್ಯ ಕೇಂದ್ರ ತೆರೆಯಬೇಕು. 2004 ರಿಂದ ತಂದಿರುವ ಹೊಸ ಪಿಂಚಣಿ ವ್ಯವಸ್ಥೆಯ ಬದಲಿಗೆ ಹಳೆ ಪಿಂಚಣಿ ವ್ಯವಸ್ಥೆಯನ್ನ ಮಾಜಿ ಅರೆಸೈನಿಕರಿಗೆ ಮುಂದುವರೆಸ ಬೇಕು. ಒನ್ ರ್ಯಾಂಕ್ ಒನ್ ಪೆನ್ಷನ್ ಅರೆ ಸೈನಿಕರಿಗೂ ನೀಡಬೇಕೆಂದು ಒತ್ತಾಯಿಸಿದರು.