ಬೆಂಗಳೂರು; ದೆಹಲಿಯಲ್ಲಿ ನಾವು ಬಿಕ್ಷೆ ಬೇಡುತ್ತಿಲ್ಲ, ಸರ್ಕಾರವೇ ನಿಗದಿ ಮಾಡುವ ಬೆಂಬಲ ಬೆಲೆ ಖಾತರಿ ಕಾನೂನು ಕೇಳುತ್ತಿದ್ದೇವೆ ಎಂದು ರೈತನಾಯಕರು ಸ್ಪಷ್ಟ ಪೆಇಸಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚ (ರಾಜಕೀಯತರ ) ದಕ್ಷಿಣ ಭಾರತ ಸಂಚಾಲಕ ಕುರುಬೂರ್ ಶಾಂತಕುಮಾರ್ ಉಪಸ್ಥಿತಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ರೈತ ಮುಖಂಡರು ಕೇಂದ್ರ ಸರ್ಕಾರದ ನಡೆ ಬಗ್ಗೆ ಅಸಮಾಧಾನ ಹೊರಹಾಕಿದರು.
ಕೇಂದ್ರ ಸರ್ಕಾರ 23 ಬೆಳೆಗಳಿಗೆ ಎಂ ಎಸ್ ಪಿ ಬೆಲೆ ನಿಗದಿ ಮಾಡಿ. ದೇಶದ ರೈತರನ್ನ ಕತ್ತಲಲ್ಲಿಟ್ಟಿದ್ದಾರೆ, ಸರ್ಕಾರವೇ ನಿಗದಿ ಮಾಡುವ ಬೆಲೆಗೆ ಶಾಸನಬದ್ಧ ಖಾತರಿ ನೀಡಬೇಕು ಎಂದು ಹೋರಾಟ ಮಾಡಿದರೆ,
ನಮ್ಮ ರೈತರನ್ನು ಭಯೋತ್ಪಾದಕರು ದೇಶದ್ರೋಹಿಗಳು ಖಲಿಸ್ತಾನಿಗಳು ಎಂದು ಹೇಳಿ ದೆಹಲಿಗೆ ಚಳುವಳಿಗೆ ಹೊರಟ ರೈತ ಹೋರಾಟಗಾರರ ಮೇಲೆ ರಬ್ಬರ್ ಬುಲೆಟ್ಗಳ ಬಾಂಬು ಹಾಕುವುದು, ಆಶ್ರುವಾಯು ಸಿಡಿಸುವುದು, ದಮನಕಾರಿ ನೀತಿಯಲ್ಲವೇ,ರೈತರು ಸರ್ಕಾರದ ಬಿಕ್ಷುಕರೇ ಅಥವಾ ದೇಶದ ಜನರಿಗೆ ಆಹಾರ ನೀಡುವ ಅನ್ನದಾತರೇ ಕೇಂದ್ರ ಸರ್ಕಾರ ಎಚ್ಚೆತ್ತು ಕೊಳ್ಳಲಿ ಎಂದು ರೈತನಾಯಕರು ಸಂದೇಶ ರವಾನಿಸಿದರು.
ರೈತರ ಸಾಲ ಸಂಪೂರ್ಣ ಮನ್ನಾ , ಸ್ವಾಮಿನಾಥನ್ ವರದಿ ಬೆಂಬಲ ಬೆಲೆ, ಡಬ್ಲ್ಯೂ ಟಿ ಓ ಒಪ್ಪಂದ ನಿಂದ ಭಾರತ ಸರ್ಕಾರ ಹೊರಗೆ ಬರಬೇಕು, ರೈತರಿಗೆ ಪಿಂಚಣಿ ನೀಡುವ ಯೋಜನೆ, ಫಸಲ್ ಭೀಮಾ ಬೆಳೆ ವಿಮೆ ಪದ್ಧತಿ ಬದಲಾಗಬೇಕು, ಕಳೆದ ವರ್ಷ ದೆಹಲಿ ರೈತ ಹೋರಾಟದಲ್ಲಿ ಪ್ರಾಣತ್ಯಾಗ ಮಾಡಿದ 750 ರೈತ ಕುಟುಂಬಕ್ಕೆ ಸರ್ಕಾರದ ನೆರವು ಕುಟುಂಬದ ಒಬ್ಬರಿಗೆ ನೌಕರಿ ನೀಡಬೇಕು ಎಂಬ ಒತ್ತಾಯಗಳನ್ನು ಮಂಡಿಸಲಾಗಿದೆ, ಕೇಂದ್ರ ಸರ್ಕಾರ ವಿನಾಕಾರಣ ವಿಳಂಬ ನೀತಿ ಅನುಸರಿಸಿ ಚೌಕಾಸಿ ಮಾಡುತ್ತಿದೆ ಎಂದು ಅಸಮಾಧಾನ ಹೊರಹಾಕಿದರು
ಭಾರತದಲ್ಲಿ ಕಬ್ಬಿನ ಎಫ್ಆರ್ಪಿ ದರ ನಿಗದಿ ಮಾಡುವ ನೀತಿಯನ್ನ ಕೈ ಬಿಡಬೇಕು ಎಂದು ಅಮೇರಿಕಾ ಹಾಗೂ ಇನ್ನೂ ಕೆಲವು ರಾಷ್ಟ್ರಗಳು ಡಬ್ಲ್ಯೂ ಟಿ ಓ ನಲ್ಲಿ ಕೇಸ್ ದಾಖಲಿಸಿ ಒತ್ತಾಯ ಮಾಡುತ್ತಿವೆ ಅದಕ್ಕಾಗಿ ವಿಶ್ವ ವ್ಯಾಪಾರ ಒಪ್ಪಂದ ಸಂಸ್ಥೆಯ ಸಭೆ 26 ರಿಂದ 29ರ ತನಕ ಅಬುದಾಬಿಯಲ್ಲಿ ನಡೆಯುತ್ತಿದೆ, ಡಬ್ಲ್ಯೂ ಟಿ ಓ ಒಪ್ಪಂದದಿಂದ ಆಗಿರುವ ಭಾರತ ದೇಶದ ರೈತರ ಸಂಕಷ್ಟದ ಪರಿಸ್ಥಿತಿಯನ್ನು ವಿವರಿಸಲು ಸಂಯುಕ್ತ ಕಿಸಾನ್ ಮೋರ್ಚ (ರಾಜಕೀಯತರ) ಸಂಘಟನೆಯಿಂದ ಕುರುಬೂರ್ ಶಾಂತಕುಮಾರ್ ಸೇರಿದಂತೆ ಮೂರು ಜನ ರೈತ ಮುಖಂಡರಿಗೆ ಈ ಸಭೆಯಲ್ಲಿ ಭಾಗವಹಿಸಲು ಆಮಂತ್ರಣ ಬಂದಿದೆ ನಾವು ಭಾಗವಹಿಸುತ್ತಿದ್ದೇವೆ ಎಂದು ಈ ಮುಖಂಡರು ಹೇಳಿದರು.
ರಾಜ್ಯದಲ್ಲಿ ರೈತರ ಹೆಸರಿನಲ್ಲಿ ಸಂಘಟನೆ ಕಟ್ಟಿಕೊಂಡು ರೈತ ಮುಖಂಡರು ರಾಜಕೀಯ ಪಕ್ಷಗಳ ಅಡಿಯಾಳುಗಳಾಗಿ ಕಾರ್ಯನಿರ್ವಹಿಸುವ ಬದಲು ರೈತರ ಸಂಕಷ್ಟ ನಿವಾರಣೆಯ ಸಮಯ ಬಂದಿದೆ ಈಗಲಾದರೂ ರೈತರ ಹಿತಾಸಕ್ತಿಗಾಗಿ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಹೋರಾಟಕ್ಕೆ ಬೀದಿಗೆ ಬನ್ನಿ, ರಾಜಕೀಯ ಪಕ್ಷದ ಹಲವು ಕಾರ್ಯಕರ್ತರು ನಾವು ರೈತರ ಮಕ್ಕಳು ರೈತರ ಅನ್ನ ತಿನ್ನುತ್ತೇವೆ ನಮ್ಮ ಬಾಯಿಗೆ ನಾವೇ ಮಣ್ಣು ಹಾಕಿಕೊಳ್ಳಬಾರದು ಎಂಬುದನ್ನು ಅರಿತುಕೊಳ್ಳದೆ, ದೆಹಲಿಯ ರೈತ ಹೋರಾಟದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಗುರವಾಗಿ ಚಳುವಳಿಯನ್ನು ಟೀಕಿಸಿ ಮಾತನಾಡಿಸುವುದನ್ನು ನಿಲ್ಲಿಸಿ,ರೈತರ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಆಗ ನಿಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಕುರುಬೂರ್ ಶಾಂತಕುಮಾರ್ ಹೇಳಿದರು.
ಕೇಂದ್ರ ಸರ್ಕಾರದ ಜೊತೆ ಈಗ ನಾಲ್ಕನೇ ಸುತ್ತಿನ ಮಾತುಕತೆ ನಡೆದಿದೆ, ಮಾತುಕತೆ ನೆಪದಲ್ಲಿ ವಿಳಂಬ ಧೋರಣೆ ಅನುಸರಿಸುವುದನ್ನು ಬಿಟ್ಟು ಸಮಸ್ಯೆ ಬಗೆರಿಸಲಿ, ಪಂಜಾಬ್ ಹರಿಯಾಣ ಉತ್ತರ ಪ್ರದೇಶ್ ರಾಜಸ್ಥಾನ್ ದ ಲಕ್ಷಾಂತರ ರೈತರು ಇಂದು ಶಾಂತಿಯುತವಾಗಿ ದೆಹಲಿ ಚಲೋ ನಡೆಸುತ್ತಿದ್ದಾರೆ ಸಮಸ್ಯೆ ಬಗೆಹರಿಯುವ ತನಕ ಚಳುವಳಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ ಎಂದ ಕುರುಬೂರು ಶಾಂತಕುಮಾರ್, ದೆಹಲಿ ಹೋರಾಟದ ಜೊತೆ ಸಾಗಲು ರಾಜ್ಯದಲ್ಲಿಯೂ ಪ್ರಬಲ ಹೋರಾಟ ರೂಪಿಸಲು ನಾಳೆ ರೈತ ಸಂಘಟನೆಗಳ ಮುಖಂಡರ ಜೊತೆ ಗೂಗಲ್ ಸಭೆ ನಡೆಸಿ ತೀರ್ಮಾನಿಸಿ ಏಕಕಾಲದಲ್ಲಿ ರಾಜ್ಯಾದ್ಯಂತ ರೈತರ ಹೋರಾಟಕ್ಕೆ ಕರೆ ನೀಡಲಾಗುವುದು ಎಂದರು
ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ನಾರಾಯಣ ರೆಡ್ಡಿ, ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ನೆಲಮಂಗಲ ತಾಲ್ಲೂಕು ಘಟಕದ ಅಧ್ಯಕ್ಷ ರಾಜೇಶ್, ಹಾರೋಹಳ್ಳಿ ಗಜೇಂದ್ರಸಿಂಗ್, ಕನಕಪುರ ಶಿವಕುಮಾರ್, ನರಸಿಂಹಯ್ಯ, ಕೊಳ್ಳೇಗಾಲ ತಾಲ್ಲೂಕು ಮಾದೇಶ್, ವೆಂಕಟೇಶ್ ಮುಂತಾದವರು ಉಪಸ್ತಿತರಿದ್ದರು