ಬೆಂಗಳೂರು: ರಾಜ್ಯದಲ್ಲಿ ಸರ್ಕಾರದ ಸಮಾರಂಭಗಳಲ್ಲಿಬಹಾರ, ತುರಾಯಿ, ಕಾಣಿಕೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ.
ರಾಜ್ಯ ಸರಕಾರ ಮತ್ತು ಸರಕಾರದ ಸ್ವಾಮ್ಯಕ್ಕೊಳಪಡುವ ಸಂಸ್ಥೆಗಳು ನಡೆಸುವ ಸಭೆ,ಸಮಾರಂಭಗಳಿಗೆ ಹೂಗುಚ್ಛ, ಹಾರ, ತುರಾಯಿ ಇತ್ಯಾದಿ ಕಾಣಿಕೆಗಳನ್ನು ನೀಡಬಾರದೆಂದು ಆದೇಶಿಸಲಾಗಿದೆ.
ಮುಖ್ಯ ಕಾರ್ಯದರ್ಶಿಗಳ ಈ ಆದೇಶವನ್ನು ಸ್ವಾಗತಿಸಿರುವ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಇದು ಸಮಾಯೋಚಿತ ನಿರ್ಧಾರವಾಗಿದ್ದು, ಈ ನಿರ್ಧಾರ ಪ್ರಕಟಿಸಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಅಭಿನಂದಿಸಿದ್ದಾರೆ.
ರಾಜ್ಯ ಸರಕಾರ ಮತ್ತು ಸರಕಾರದ ಸ್ವಾಮ್ಯಕ್ಕೊಳಪಡುವ ಸಂಸ್ಥೆಗಳು ನಡೆಸುವ ಸಭೆ,ಸಮಾರಂಭಗಳಿಗೆ ಹೂಗುಚ್ಛ,ಹಾರ,ತುರಾಯಿ ಇತ್ಯಾದಿ ಕಾಣಿಕೆಗಳನ್ನು ನೀಡಬಾರದೆಂದು @csogok ಅವರು ನಿರ್ದೇಶಿಸಿದ್ದು,ಅದನ್ನು ನಾನು ಸ್ವಾಗತಿಸುತ್ತೇನೆ.
ಈ ಸಮಾಯೋಚಿತ ನಿರ್ಧಾರ ಪ್ರಕಟಿಸಿದ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ @BSBommai ಅವರಿಗೆ ಅಭಿನಂದಿಸುತ್ತೇನೆ. https://t.co/4zuUexdkY8— Dr. Murugesh R Nirani (@NiraniMurugesh) August 10, 2021