📝 ರಾಘವೇಂದ್ರ ಗಂಜಾಮ್
ರಾಜ್ಯಾದ್ಯಂತ ಶುಕ್ರವಾರ ನಿಖಿಲ್ ಕುಮಾರಸ್ವಾಮಿ ಅಭಿನಯದ ರೈಡರ್ ಚಿತ್ರ ಬಿಡುಗಡೆಯಾಗಿದೆ. ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲೂ 10 ಚಿತ್ರಮಂದಿರದಲ್ಲಿ ಈ ಚಿತ್ರ ಬಿಡುಗಡೆಯಾಗಿದ್ದು, ‘ರೈಡರ್’ ಅಬ್ಬರ ಜೋರಾಗಿದೆ.
ನಿಖಿಲ್ ಅಭಿಮಾನಿಗಳು ಸಂಭ್ರಮದಿಂದ ರೈಡರ್ ಚಿತ್ರವನ್ನು ಥಿಯೇಟರ್ ಮುಂದೆ ಹಬ್ಬದ ರೀತಿ ಆಚರಿಸಿ ರೈಡರ್ ಚಿತ್ರಕ್ಕೆ ಭರ್ಜರಿಯಾಗಿ ಸ್ವಾಗತ ಕೋರಿದ್ರು. ಮಂಡ್ಯದ ಗುರುಶ್ರೀ, ವೆಂಕಟೇಶ್ವರ, ಮಳವಳ್ಳಿ ಮಹಾಲಕ್ಷ್ಮಿ, ಕೆ.ಆರ್.ಪೇಟೆಯ ಬಸವೇಶ್ವರ ಶ್ರೀರಂಗಪಟ್ಟಣದ ಶ್ರೀದೇವಿ ಚಿತ್ರಮಂದಿರ ಸೇರಿ ಹಲವೆಡೆ ಚಿತ್ರ ಬಿಡುಗಡೆಯಾಗಿದ್ದು ಮೊದಲ ದಿನವೇ ಪ್ರೇಕ್ಷಕರು ಭರ್ಜರಿ ರೆಸ್ಪಾನ್ಸ್ ನೀಡಿದ್ರು.
ಮಂಡ್ಯದ ಗುರುಶ್ರೀ ಚಿತ್ರಮಂದಿರದ ಮುಂದೆ ನಾಯಕ ನಟ ನಿಖಿಲ್ ಕುಮಾರ ಸ್ವಾಮಿ ಕಟೌಟ್ ಗೆ ಕ್ಷೀರಾಭಿಷೇಕ ಮಾಡಿದ್ರೆ, ವೆಂಕಟೇಶ್ವರ ಚಿತ್ರಮಂದಿರದಲ್ಲಿ ಪ್ರದರ್ಶನದ ವೇಳೆ ತರೆಯ ಮೇಲೆ ಬರುವ ನಿಖಿಲ್ ಕುಂಬಲಕಾಯಿಯಿಂದ ಇಳಿ ತೆಗೆದು ನಿಖಿಲ್ ಗೆ ಜೈಕಾರ ಕೂಗುವ ಮೂಲಕ ಚಿತ್ರ ಶತದಿನ ಆಚರಿಸಲೆಂದು ಹಾರೈಸಿದ್ರು.
ನಿಖಿಲ್ ಅಭಿನಯದ ರೈಡರ್ ಚಿತ್ರಕ್ಕೆ ಮೊದಲ ದಿನವೇ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು ಚಿತ್ರ ನೋಡಲು ಪ್ರೇಕ್ಷಕರು ಮುಗಿಬಿದ್ರು.ಥಿಯೇಟರ್ ಮುಂದೆ ಕಾಲೇಜು ಯುವಕ ಯುವತಿಯರು ನಿಂತು ಚಿತ್ರ ನೋಡಲು ಮುಗಿಬಿದ್ರು.ಇನ್ನು ನಿಖಿಲ್ ಅಭಿಮಾನಿಗಳು ಚಿತ್ರಮಂದಿರಗಳಲ್ಲಿ ಚಿತ್ರ ನೋಡಲು ಬರುವ ಪ್ರೇಕ್ಷಕರಿಗೆ ಸಿಹಿ ವಿತರಿಸಿ ಸಂಭ್ರಮಾಚರಣೆ ನಡೆಸಿ ನಿಖಿಲ್ ಚಿತ್ರಕ್ಕೆ ಶುಭ ಕೋರಿದ್ರು.