ಬೆಂಗಳೂರು: ಪಕ್ಷದ ವರಿಷ್ಠರು ಸಂಪುಟಕ್ಕೆ ಯಾರನ್ನು ತೆಗೆದುಕೊಳ್ಳುತ್ತಾರೆ ಯಾರನ್ನು ಬಿಡುತ್ತಾರೆ ಎಂದು ಇನ್ನೂ ಎಲ್ಲಿಯೂ ಹೇಳಿಲ್ಲ. ಊಹಾಪೋಹ ಕಲ್ಪನೆಯ ಸುದ್ದಿಗಳಿಗೆಲ್ಲ ಪ್ರತಿಕ್ರಿಯಿಸುವುದಿಲ್ಲ ಎಂದು ಮಾಜಿ ಸಚಿವ ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಪಕ್ಷ ಬಿಟ್ಟುಬಂದಾಗಲೇ ನಾವೆಲ್ಲ ಆತಂಕಪಡಲಿಲ್ಲ. ಪಕ್ಷ ಬಿಟ್ಟು ಬಂದಾಗ ನಮ್ಮನ್ನು ಬಿಜೆಪಿ ಚೆನ್ನಾಗಿ ನಡೆಸಿಕೊಂಡು ಮಂತ್ರಿಸ್ಥಾನ ನೀಡಿತ್ತು. ಎಲ್ಲವೂ ವರಿಷ್ಠರ ಗಮನದಲ್ಲಿದೆ. ಹೊಸದಾಗಿ ಹೇಳುವಂತಹದ್ದೇನಿಲ್ಲ.ಬಿಜೆಪಿ ಪಕ್ಷ ರಾಜಕೀಯವಾಗಿ ಬಹಳ ದೊಡ್ಡ ಪಕ್ಷ.ಪಕ್ಷದ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ ಎಂದರು.