ಬೆಂಗಳೂರು: ರಾಜಧಾನಿ ಹೊರವಲಯದ ನೆಲಮಂಗಲ ಬಳಿ ನಡೆದ ವಿಶೇಷ ಕಾರ್ಯಕ್ರಮ ಗಮನಸೆಳೆಯಿತು.
ಶೆಟ್ಟಿಹಳ್ಳಿಯಲ್ಲಿ ಬೆಂಗಳೂರು ನಗರ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಾಜಿ ಶಾಸಕ ಎಸ್ ಮುನಿರಾಜು ರವರಿಗೆ ಕನ್ನಡ ಸೇವಾ ರತ್ನ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕಸಾಪ ಅಧ್ಯಕ್ಷ ವೈ ಬಿ ಎಚ್ ಜಯದೇವ್ ಮಾತನಾಡಿ ದಾಸರಹಳ್ಳಿ ಕ್ಷೇತ್ರ ಕಸಾಪದಿಂದ ನೂರಾರು ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದು, ಪುಸ್ತಕ ಬಿಡುಗಡೆ, ಕವಿಗೋಷ್ಠಿ, ಕನ್ನಡ ಪುಸ್ತಕ ವಿತರಣೆ, ಉದ್ಯಾನವನಗಳಲ್ಲಿ ಕನ್ನಡ ಧ್ಯಾನ, ಸಮ್ಮೇಳನ, ಕವಿ ಮನೆಗಳಲ್ಲಿ ಕನ್ನಡ ಕಾರ್ಯಕ್ರಮ, ಅನ್ಯ ಭಾಷಿಕರಿಗೆ ಕನ್ನಡ ಕಲಿಕಾ ಅಭಿಯಾನ, ಕನ್ನಡ ನಾಮಫಲಕ ಕಡ್ಡಾಯ, ಇನ್ನು ಮುಂತಾದ ಕಾರ್ಯಕ್ರಮಗಳ ಮೂಲಕ ಕ್ಷೇತ್ರದೆಲ್ಲೆಡೆ ಕನ್ನಡ ಜಾಗೃತಿ ಮೂಡಿಸಿಕೊಂಡು ಬಂದಿದ್ದೇವೆ ಎಂದರು.
ಬಿಜೆಪಿ ಮುಖಂಡರಾದ ಬಿ.ಟಿ ಶ್ರೀನಿವಾಸ್ , ವಿನೋದ್ ಗೌಡ, ಪದಾಧಿಕಾರಿಗಳಾದ ಪ್ರಸನ್ನಕುಮಾರ್, ಕೃಷ್ಣ, ಸೋಮಶೇಖರ್, ಪ್ರಶಾಂತ್ ಗೌಡ, ಭಾರತಿ ವೈ ಕೋಕಲೆ ಮೊದಲಾದವರು ಸಮಾರಂಭದಲ್ಲಿ ಭಾಗವಹಿಸಿದ್ದರು. .