ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC)ವು ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ (PRCI) ವತಿಯಿಂದ ನಡೆದ 15ನೇ ವಿಶ್ವ ಸಂವಹನ ಸಮ್ಮೇಳನ ಮತ್ತು ಎಕ್ಸಲೆನ್ಸ್ ಅವಾರ್ಡ್ಸ್ 2025 ರ ಕಾರ್ಯಕ್ರಮದಲ್ಲಿ 9 ವಿಭಾಗಗಳಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಗಳಿಸಿದೆ.
ಈ ಕೆಳಗಿನ ವಿಭಾಗಗಳಲ್ಲಿ ಪ್ರಶಸ್ತಿಗಳು ಲಭಿಸಿದೆ:
- ಡಿಜಿಟಲ್ ಮೀಡಿಯಾ ಇನೋವೇಶನ್ ಮತ್ತು ಹೌಸ್ ಜರ್ನಲ್ ಪ್ರಿಂಟ್ (ಪ್ರಾದೇಶಿಕ) ವಿಭಾಗದಲ್ಲಿ ಚಿನ್ನದ ಪದಕ
- ಹೆಲ್ತ್ ಕೇರ್ ಕಮ್ಯುನಿಕೇಶನ್ ಫಿಲ್ಮ್ಸ್ ವಿಭಾಗದಲ್ಲಿ ಬೆಳ್ಳಿ ಪದಕ
- ವಿಶಿಷ್ಟ ಮಾನವ ಸಂಪನ್ಮೂಲ (HR) ಕಾರ್ಯಕ್ರಮಕ್ಕಾಗಿ ಕಂಚಿನ ಪದಕ
- ಗ್ರಾಹಕ ಸೇವಾ ಶ್ರೇಷ್ಠತೆ, ಬ್ಯಾಂಡಿಂಗ್, ವೆಬ್‌ಸೈಟ್ ಮತ್ತು ಮೈಕ್ರೋಸೈಟ್, ಕಾರ್ಪೊರೇಟ್ ಫಿಲ್ಮ್ಸ್, ಮಾರ್ಕೆಟಿಂಗ್ ಕ್ಯಾಂಪೇನ್ ಮತ್ತು ಆಂತರಿಕ ಕಮ್ಯುನಿಕೇಶನ್ ಕ್ಯಾಂಪೇನ್ ವಿಭಾಗಗಳಲ್ಲಿ ಪ್ರಶಸ್ತಿಗಳು ಲಭಿಸಿರುತ್ತವೆ.
ಈ ಸಾಧನೆಗಳು ನಿಗಮವು ಆಧುನಿಕ ತಂತ್ರಜ್ಞಾನ, ನವೀನ ಚಟುವಟಿಕೆಗಳು ಮತ್ತು ಪರಿಣಾಮಕಾರಿ ಸಾರ್ವಜನಿಕ ಸಂಪರ್ಕ ಕಾರ್ಯಾಚರಣೆಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಸಂಘಟಕರು ಬಣ್ಣಿಸಿದ್ದಾರೆ.
ಗೋವಾದ ದ ಫರ್ನ್ ಕದಂಬ ಹೋಟೆಲ್ನಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಗೋವಾ ವಿಧಾನಸಭಾಧ್ಯಕ್ಷ ಡಾ.ಗಣೇಶ್ ಗಾಂವ್ಕರ್, ನಟಿ ಮತ್ತು ಗಾಯಕಿ ಕುಮಾರಿ ಎಸ್ಟರ್ ವ್ಯಾಲೆರಿ ನೊರೊನ್ಹಾ , ನಟ, ರೂಪದರ್ಶಿ ಮಿಲಿನ್ ತೆಂಡೂಲ್ಕರ್, PRCI ಅಧ್ಯಕ್ಷ ಎಂ.ಬಿ.ಜಯರಾಮ್ ಪ್ರಶಸ್ತಿ ಪ್ರದಾನ ಮಾಡಿದರು. KSRTC ತುಮಕೂರು ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್, ಚಿಕ್ಕಬಳ್ಳಾಪುರ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜು ಅವರು ನಿಗಮದ ಪರವಾಗಿ ಪ್ರಶಸ್ತಿಗಳನ್ನು ಸ್ವೀಕರಿಸಿದರು.