ಅಯೋಧ್ಯೆಯಲ್ಲಿ ಶ್ರೀ ರಾಮನ ಭವ್ಯ ದೇಗುಲ ನಿರ್ಮಾಣದ ಕನಸು ನನಸಾಗಿದೆ. ದೇಗುಲ ಲೋಕಾರ್ಪಣೆಯ ಸಂದರ್ಭದಲ್ಲಿ ಇಡೀ ದೇಶದಲ್ಲಿ ಹಬ್ಬದ ವಾತಾವರಣ ನೆಲೆಸಿದೆ. ಎಲ್ಲೆಲ್ಲೂ ರಾಮ ನಾಮ ಸ್ಮರಣೆ, ಜಪ-ತಪ ಸಾಗಿದೆ.
ಇದೇ ವೇಳೆ, ರಾಮನನ್ನು ಪೂಜಿಸುವ ಕನ್ನಡ ಹಾಡೊಂದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಮನಸೋತಿದ್ದಾರೆ.
ಮಾಜಿಕ ಜಾಲತಾಣದಲ್ಲಿ ಕನ್ನಡ ಹಾಡೊಂದನ್ನು ಆಲಿಸಿರುವ ನರೇಂದ್ರ ಮೋದಿಯವರು ಆ ಹಾಡಿಗೆ ತಲೆದೂಗಿದ್ದಾರೆ.
ಈ ಹಾಡನ್ನು ಸಾಮಾಜಿಕಜಾಲತಾಣ ‘X’ನಲ್ಲಿ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರು, ‘ಕನ್ನಡದಲ್ಲಿ ಶಿವಶ್ರೀ ಸ್ಕಂದಪ್ರಸಾದ್ ಅವರ ಈ ನಿರೂಪಣೆಯು ಪ್ರಭು ಶ್ರೀರಾಮನ ಭಕ್ತಿಯ ಮನೋಭಾವವನ್ನು ಸುಂದರವಾಗಿ ಎತ್ತಿ ತೋರಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂತಹ ಪ್ರಯತ್ನಗಳು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವಲ್ಲಿ ಬಹಳ ದೂರ ಸಾಗುತ್ತವೆ ಎಂದವರು ಪ್ರತಿಪಾದಿಸಿದ್ದಾರೆ.
This rendition by Sivasri Skandaprasad in Kannada beautifully highlights the spirit of devotion to Prabhu Shri Ram. Such efforts go a long way in preserving our rich cultural heritage. #ShriRamBhajanhttps://t.co/9wYmjhC4p5
— Narendra Modi (@narendramodi) January 16, 2024
























































