ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಸಂದರ್ಭದಲ್ಲಿ ಭಾರತ ದಾಖಲೆಯೊಂದನ್ನು ಬರೆದಿದೆ.
ಮೋದಿ ಹುಟ್ಟುಹಬ್ಬದ ದಿನವಾದ ಶುಕ್ರವಾರ ವಿವಿಧ ರಾಜ್ಯಗಳಲ್ಲಿ ಲಸಿಕಾ ಮೇಳ ನಡೆದಿದ್ದು ಒಂದೇ ದಿನ 2 ಕೋಟಿಗೂ ಹೆಚ್ಚು ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ. ಒಂದೇ ದಿನದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಲಸಿಕೀಕರಣವಾಗಿರುವುದು ಜಾಗತಿಕ ದಾಖಲೆ ಎನ್ನಲಾಗಿದೆ.
ದೇಶಾದ್ಯಂತ ಹಮ್ಮಿಕೊಳ್ಳಲಾಗಿದ್ದ ಕೊರೊನಾ ಲಸಿಕೆ ಅಭಿಯಾನ ಅದ್ಭುತ ಗುರಿ ಸಾಧಿಸಿದೆ. ಕೊರೊನಾ ಲಸಿಕೆ ಅಭಿಯಾನವನ್ನು ಜನವರಿಯಲ್ಲಿ ಶುರು ಮಾಡಲಾಗಿದ್ದು, ಆಗಿನಿಂದ ಈವರೆಗೆ ಇದೇ ಮೊದಲ ಬಾರಿಗೆ 2 ಕೋಟಿ ಡೋಸ್ ಗಡಿ ದಾಟಿದ್ದು ದಾಖಲೆಯನ್ನು ನಿರ್ಮಿಸಿದಂತಾಗಿದೆ. ಶುಕ್ರವಾರ ಬರೋಬ್ಬರಿ 2,11,28,784 ಡೋಸ್ಗಳನ್ನು ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.
#LargestVaccineDrive #Unite2FightCorona pic.twitter.com/Uly8hVAZY6
— Ministry of Health (@MoHFW_INDIA) September 17, 2021
ಮಧ್ಯಾಹ್ನ 1.30ರ ಹೊತ್ತಿಗೆ ಒಂದು ಕೋಟಿ ಡೋಸ್ ಗುರಿ ಸಾಧಿಸಲಾಗಿತ್ತು. ಸಂಜೆಯಾಗುತ್ತಲೇ 2 ಕೋಟಿಗೂ ಹೆಚ್ಚುಮಂದಿ ಲಸಿಕೆ ಹಾಕಿಸಿಕೊಂಡರು.
https://twitter.com/MoHFW_INDIA/status/1438899588975394816
ಈ ಕುರಿತಂತೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಸಂತಸ ಹಂಚಿಕೊಂಡಿದ್ದಾರೆ.
At 6 15 pm Karnataka stands first in vaccination today with 2301639 vaccinations . Well done @BSBommai @mla_sudhakar . You still have 3 more active hours . pic.twitter.com/KHoFzoFv1i
— B L Santhosh ( Modi Ka Parivar ) (@blsanthosh) September 17, 2021